ಮೆಡ್ಲೇರಿಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಸ್ತ್ರಚಿಕಿತ್ಸಾ ಶಿಬಿರ
ರಾಣೇಬೆನ್ನೂರು01: ತಾಲೂಕಿನ ಸಾವಿರಾರು ಜನರು ಆರೋಗ್ಯ ತಪಸ್ಸಣೆಯನ್ನು ಸದುಪಯೋಗವನ್ನು ಪಡಿಸಿಕೊಂಡರು. ಅದರಲ್ಲಿ 150 ರಿಂದ 170 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಎಪಿಎಂಸಿ ಮಾಜಿ ಸದಸ್ಯ ಬಸವರಾಜ ಹುಲ್ಲತ್ತಿ ಹೇಳಿದರು.
ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಗಜಾನನ ಯುವಕ ಮಂಡಳಿಯ 25ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಹಾಗೂ ದಿ ಲಕ್ಕಪ್ಪ ಪೂಜಾರ ಇವರ ಸ್ಮರಣಾರ್ಥವಾಗಿ ಮಾರುತಿ ಕಲ್ಯಾಣ ಮಂಟಪದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗಜಾನನ ಯುವಕ ಮಂಡಳಿಯ ವತಿಯಿಂದ ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಗಣೇಶ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದು, ಪ್ರತಿವರ್ಷ ಇಲ್ಲಿನ ಗಜಾನನ ಯುವಕ ಮಂಡಳಿಯವರು ಕೇವಲ ಗಜಾನನ ಪ್ರತಿಷ್ಠಾಪನೆಗಷ್ಟೆ ಸೀಮಿತವಾಗದೆ. ಇಂತಹ ಹಲವಾರು ಜನಪರ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಗಜಾನನ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಹಿರಿಯರ ಸಹಾಯ ಸಹಕಾರದಿಂದ ಯಶಸ್ವಿಯಾಗಿ 25ನೇ ವರ್ಷದ ಗಣೇಶೋತ್ಸವದ ಹೊಸ್ತಿಲಲ್ಲಿ ನಿಂತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಸೆ30 ರಂದು ಶನಿವಾರ ಬೆಳಗ್ಗೆ 9:00 ರಿಂದ 3:00 ವರೆಗೆ ಮಂಗಳೂರಿನ ಜಿ ಆರ್ ಆಸ್ಪತ್ರೆ ಮತ್ತು ಬೆಂಗಳೂರಿನ ಗಿರೀಶ್ ಕೆಂಚಪ್ಪನವರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮಸ್ಥರು ಸಂಘ ಸಂಸ್ಥೆಗಳ ಸಹಯೋಗದಲ್ಲಿ 25ನೇ ವರ್ಷದ ಗಜಾನನ ಉತ್ಸವದ ಅಂಗವಾಗಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ರೋಗಗಳು, ಚರ್ಮರೋಗ ಚಿಕಿತ್ಸೆ , ಸ್ತ್ರೀ ರೋಗ ಚಿಕಿತ್ಸೆ, ಕಿವಿ ಮೂಗು ಗಂಟಲು ಚಿಕಿತ್ಸೆ , ನೇತ್ರ ಚಿಕಿತ್ಸೆ , ಎಲುಬು ಕೀಲು, ಅಪೆಂಡಿಕ್ಸ್ , ಅಲ್ಸರ್, ಥೈರಾಯ್ಡ್, ಹರಣಿ, ಗರ್ಭಕೋಶದ ಗಡ್ಡೆ ಮೂಲವ್ಯಾಧಿಯಂತಹ ಯಾವಾಗ ಯಾವುದೇ ಆಪರೇಷನ್ ಇದ್ದಲ್ಲಿ ಉಚಿತ ಸೇವೆ ನೀಡಲಾಗುವುದು. ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಜಾನನ ಯುವಕ ಮಂಡಳಿಯವರು ಆಯೋಜಿಸಲಾಗರುವುದು ಶ್ಲಾಘನೀಯ. ತಪಾಸಣೆ ಮಾಡಿದ ರೋಗಿಗಳಿಗೆ ಉಚಿತ ಔಷಧಿ ಮತ್ತು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಆಸ್ಪತ್ರೆಗೆ ಹೋಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗರುವುದು ಇದು ಒಳ್ಳೆಯ ಕಾರ್ಯವಗಿದೆ ಎಂದರು.ಇದೇ ಸಂದರ್ಭದಲ್ಲಿ ಗುಡ್ದಪ್ಪ, ನಿಂಗಪ್ಪ ಹೊನ್ನತ್ತಿ, ಶಿವರಾಜ ಪೂಜಾರ, ಮಂಜು ರೂಪದ, ಮಂಜು ಬಾಕರ್ಿ, ಗಣೇಶ ಬಿರಾಳ, ಹೋನ್ನಪ್ಪ ಗಡ್ಡೆರ್, ದಿಳೆಪ್ಪ ರಂಗಪ್ಪನವರ, ದಿಳೆಪ್ಪ ಲಮಾಣಿ, ಯುವಕರು ಮುಖಂಡರು ಭಾಗವಹಿಸಿದ್ದರು