ಉಚಿತ ಮಾಸ್ಕ್, ಸ್ಯಾನಿಟೈಜರ ವಿತರಣೆ
ಲೋಕದರ್ಶನ ವರದಿ
ಇಂಡಿ 02: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರಗಳನ್ನು ವಿತರಿಸಿ ಜಿಲ್ಲಾ ಸೇವಾದಳದ ಉಪಾಧ್ಯಕ್ಷ ಶ್ರೀ
ಮಂತ ಇಂಡಿ ಅರಿವು ಮೂಡಿಸಿದರು.
ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊವೀಡ್-19ರ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಕರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿದರು.
ಕಾಲೇಜಿನ ಹಿರಿಯ ಉಪನ್ಯಾಸಕಿ ಎಸ್.ಎಚ್. ಪಾಟೀಲ, ಪ್ರೌಢಶಾಲೆಯ ಮುಖ್ಯ ಗುರು ಎಮ್.ಪಿ. ಬಿರಾದಾರ, ನಾಗೇಶ ಡೋಣೂರ, ಅಂಬಣ್ಣ ಸುಣಗಾರ, ಜಿ.ಜಿ. ಬರಡೋಲ, ಎಸ್.ಬಿ. ಕಲ್ಲೋಳ್ಳಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.