ಸುಣಕಲ್ ಬಿದರಿಯಲ್ಲಿ ಉಚಿತ ಕಾನೂನು ಅರಿವು ನೆರವು ಶಿಬಿರ
ರಾಣೆಬೆನ್ನೂರು 04: ಭಾರತೀಯ ನೆಲದ ಕಾನೂನು ಪ್ರತಿಯೊಬ್ಬರನ್ನು ನ್ಯಾಯಾಲಯದ ಕಕ್ಷೆಯಲ್ಲಿ ಸಂರಕ್ಷಿಸುತ್ತದೆ ಕಾನೂನು ಎಲ್ಲರಿಗೂ ಒಂದೇ ಇಲ್ಲಿ ಯಾವುದೇ ಜಾತಿ ಮತ ಭೇದ ಭಾವ ಇಲ್ಲ ಕಾನೂನು ನಾವು ಗೌರವಿಸಿದರೆ ಅದು ನಮ್ಮನ್ನು ಸದಾ ಗೌರವಿಸುತ್ತದೆ ಎಂದು ನ್ಯಾಯವಾದಿ, ನೋಟರಿ ಕುಮಾರ್ ಮಡಿವಾಳರ ಹೇಳಿದರು. ಅವರು ಗುರುವಾರ ತಾಲೂಕಿನ ಸುಣಕಲ್ ಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಪ.ಪೂ ಕಾಲೇಜು, ಎನ್ಎಸ್ಎಸ್ ಘಟಕ, ರಾಷ್ಟ್ರೀಯ ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಸಹ ಯೋಗದಲ್ಲಿ ನಡೆದ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪ್ರತಿಯೊಬ್ಬರು ಬದುಕುವ ಹಕ್ಕಿದೆ, ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಹೀಗಿರುವಾಗ ನೊಂದು ಬೆಂದವರು, ಯಾವುದೇ ಮಡಿವಂತಿಕೆ ಇಲ್ಲದೆ ಉಚಿತವಾಗಿ ದೊರೆಯುವ, ಕಾನೂನಿನ ಅಡಿಯಲ್ಲಿ ನ್ಯಾಯವನ್ನು ಪಡೆಯುವುದು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದ ಅವರು, ಕಾನೂನು ಸೇವಾ ಪ್ರಾಧಿಕಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಿದೆ ಎಂದರು. 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡಿ ಅಪಘಾತ ಪಡಿಸಿದರೆ, ಸಂಬಂಧಿಸಿದ ಪಾಲಕರು ಜೀವನಪರ್ಯಂತೆ ತೊಂದರೆ ಅನುಭವಿಸಬೇಕಾಗುತ್ತದೆ ಅದಕ್ಕಾಗಿ ಸರ್ಕಾರದ ಮತ್ತು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪರಿ ಪಾಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವಗೌಡ್ರ ಜಾಪಾಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಂ.ಬಿ.ಜಾಡರ್, ನಿಂಗಪ್ಪ ಬಿಷ್ಟಣ್ಣನವರ, ಯೋಜನಾಧಿಕಾರಿ ಎಚ್ ಶಿವಾನಂದ್ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಸುನಂದಾ ವಗ್ಗರಣಿ, ಸದಸ್ಯರಾದ ಭರಮ ಗೌಡ ಕುಡುಪಲಿ, ಲಲಿತಾ ಪ್ರವೀಣ್ ಕುಮಾರ್, ಆರ್. ಹೆಚ್.ಕೊರಕಲಿ, ಚಂದ್ರಶೇಖರ ದೇವಾಂಗದ, ಮಾಲತೇಶ ಕಾಕೋಳ, ಉಪನ್ಯಾಸಕರಾದ, ಎಂ ಶಿವಕುಮಾರ್, ಕೆ ಶಶಿಕುಮಾರ್, ಅಶೋಕ ಲಮಾಣಿ, ರೇಣುಕಾ ಗಳಗನಾಥ, ಸರಸ್ವತಿ ಕಮದೋಡ, ವಿಜಯಕುಮಾರ್, ಕೆ ಜೆ ಆಶಾ,ಉಮೇಹಬಿಬಾ, ಎಸ್ ಎಸ್ ಬಡ್ನಿ, ಜೆ ಜಯಪ್ರಕಾಶ್, ಜಿ ಸುಚಿತ್ರ, ಕೃಷ್ಣ ಯರಬಾಳು, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘಟನೆಯ ಪದಾಧಿಕಾರಿಗಳು ಗ್ರಾಮದ ಅನೇಕ ಗಣ್ಯರು ಉಪಸ್ಥಿತರಿದ್ದರು.