ಉಚಿತ ಆರೋಗ್ಯ ಸಂದರ್ಶನ ಶಿಬಿರ
ರಾಣೇಬೆನ್ನೂರು 26: ಇಲ್ಲಿನ ಕೆ. ಹೆಚ್. ಬಿ.ಕಾಲೋನಿ ವಿನಾಯಕ ನಗರದ ಕರಾವಳಿ ಸಭಾಭವನದಲ್ಲಿ ಸೆ. 28ರಂದು ಗುರುವಾರ ಮುಂಜಾನೆ 9 ರಿಂದ ಸಂಜೆ 4 ಘಂಟೆವರೆಗೆ ಸಾರ್ವಜನಿಕವಾಗಿ ಉಚಿತ ಆರೋಗ್ಯ ಸಂದರ್ಶನ ಶಿಬಿರ ಏರಿ್ಡಸಲಾಗಿದೆ.
ಶಿರಸಿ ನಿಸರ್ಗ ಮನೆ, ಆರೋಗ್ಯ ಅಂಕಣಕಾರ ಡಾ. ವೆಂಕಟರಮಣ ಹೆಗಡೆ ಅವರು ಆರೋಗ್ಯ ಸಂಬಂಧಿತ ಎಲ್ಲ ಸಮಸ್ಯೆಗಳಿಗೂ ನಿಸರ್ಗ ಚಿಕಿತ್ಸೆಯ ಮಾಹಿತಿ ಮಾರ್ಗದರ್ಶನ ಮತ್ತು ಸಲಹೆ ಸೂಚನೆ ನೀಡಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಕಾರ್ಯಕ್ರಮ ಆಯೋಜಕರಾದ ರಾಣೆಬೆನ್ನೂರು ಕರಾವಳಿ ಬಳಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.