ಅರಿಹಂತ ಶಿಕ್ಷಣ ಸಮಿತಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ಕಾಗವಾಡ,04 : ಡಾ. ಎನ್ ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಅಂಕಲಿ ಹಾಗೂ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ ಗೋವಾ ಇವರ ಸಂಯೋಗದೊಂದಿಗೆ ದಿ. 3 ರಂದು ಶಿರಗುಪ್ಪ ಗ್ರಾಮದ ಅರಿಹಂತ ಶಿಕ್ಷಣ ಸಮಿತಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಆಯುರ್ವೇದಿಕ್ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು.
ಶಿಬಿರವನ್ನು ಡಾ. ಎನ್.ಎ. ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಸುರೇಶ ಚೌಗಲೆ ಉದ್ಘಾಟಿಸಿದರು. ಶಿಬಿರದಲ್ಲಿ ಅರಿಹಂತ ಶಿಕ್ಷಣ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಹಾಗೂ ಪೋಷಕರ ಈ ಶಿಬಿರದ ಲಾಭ ಪಡೆದುಕೊಂಡರು.ಹಾಗೂ ಸಾವಿರಕ್ಕೂ ಅಧಿಕ ಉಚಿತ ಓಷಧಿ ಕಿಟ್ಟುಗಳ ವಿತರಣೆಯನ್ನು ಮಾಡಲಾಯಿತು. ಹಾಗೂ ಕಿಟ್ಟುಗಳ ಉಪಯೋಗ ತಿಳಿಸಲಾಯಿತು. ಇತರ ಉಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡರು.ಈ ವೇಳೆ ಸಿಬ್ಬಂದಿ ವರ್ಗದವರು, ಶಿರುಗುಪ್ಪ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಮಗೌಡ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಪಿಡಿಓ ಉಪಸ್ಥಿತರಿದ್ದರು. ಶಿಬಿರದಲ್ಲಿ ವೈದ್ಯ ತಜ್ಞರಾದ ಡಾ. ಅಲ್ತಾಫ್, ಡಾ. ಹೇಮಂತ್ ಪಾಟೀಲ್, ಬಾಹುಬಲಿ ಬನಾಜ್. ಯಾಕುಬ್ ತಾಂಬಾಟ್. ದೀಪಕ್ ಜಾದವ ಸೇರಿದಂತೆ ಸ್ನಾತಕ- ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು