ಇಂಡಿ

ಗರ್ಭಿಣಿಯರಿಗೆ ಉಚಿತ ಎಚ್‌ಐವಿ ತಪಾಸಣೆ ಸೌಲಭ್ಯ: ಕುಲಕರ್ಣಿ

ಗರ್ಭಿಣಿಯರಿಗೆ ಉಚಿತ ಎಚ್‌ಐವಿ  ತಪಾಸಣೆ ಸೌಲಭ್ಯ: ಕುಲಕರ್ಣಿ


ಇಂಡಿ: ಎಚ್‌ಐವಿ ಮುಕ್ತ ಸಮಾಜಕ್ಕಾಗಿ ತಾಯಿಯಿಂದ ಮಗುವಿಗೆ ಬರದಂತೆ ತಡೆಗಟ್ಟಲು ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತ ಎಚ್‌ಐವಿ  ತಪಾಸಣೆ ಸೌಲಭ್ಯ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ತಾಯಿಯಿಂದ ಮಗುವಿಗೆ ಎಚ್‌ಐವಿ  ಸೋಂಕು ಹರಡುವಿಕೆ ನಿರ್ಮೂಲನೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ ಕೋಳೆಕರ, ಡಾ. ಪ್ರಶಾಂತ ಧೂಮಗೊಂಡ ಏಡ್ಸ ರೋಗದ ಕುರಿತು ಮಾತನಾಡಿದರು.  

ವೈದ್ಯರಾದ ಪ್ರೀತಿ ಕೋಳೇಕರ, ರಮೇಶ ರಾಠೋಡ, ವಿಪುಲ್ ಕೋಳೆಕರ, ಅಮೀತ ಕೋಳೆಕರ, ಜಗದೀಶ ಬಿರಾದಾರ, ಸಿಬ್ಬಂದಿ ಸವಿತಾ ಕನಾಳ, ವಿಜಯಾದೇವಿ ಹಾದಿಮನಿ, ಪ್ರದೀಪ ಬೂದಿಹಾಳ, ಎಸ್‌.ಎಚ್‌.ಅತನೂರ, ಎಸ್‌.ಎಂ.ಪೂಜಾರ, ಸುರೇಶ ಪತ್ತಾರ, ಲಕ್ಷ್ಮೀ ಅಳ್ಳಗಿ, ಸೋಮನಿಂಗ ಬಿರಾದಾರ, ಕೆ.ಜಿ.ಶೀಲವಂತ ಮತ್ತಿತರಿದ್ದರು. 


ಸುದ್ದಿ ಓದಿ