ಜಮಖಂಡಿ

ನಾಲ್ಕು ಜನ ಯೂಟೂಬ್ ಚಾನೆಲ್ ವರದಿಗಾರ ಬಂಧನ

ನಾಲ್ಕು ಜನ ಯೂಟೂಬ್ ಚಾನೆಲ್ ವರದಿಗಾರ ಬಂಧನ

ಜಮಖಂಡಿ 26: ಕಳೆದ ಎರಡು ತಿಂಗಳ ಕಾಲ ತೆಲೆಮರೆಸಿಕೊಂಡು ತಿರುಗಾಡುತ್ತಿದ್ದ ನಾಲ್ಕು ಜನ ಯೂಟೂಬ್ ಚಾನೆಲ್ ವರದಿಗಾರರು ಹಾಗೂ ಮಾಹಿತಿ ಹಕ್ಕು ಹೋರಾಟಗಾರರನ್ನು ಶಹರ ಠಾಣೆಯ ಪೊಲೀಸರು ಬಂಧಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದ್ದೆ. 

ತಾಲೂಕಾ ಸರಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಯೂಟೂಬ್ ಚಾನೆಲ್ ವರದಿಗಾರರೆಂದು ಹಾಗೂ ಮಾಹಿತಿ ಹಕ್ಕು ಹೋರಾಟಗಾರೆಂದು ಸೇವೆಗೆ ಅಡ್ಡಿಪಡಿಸಿರುವ ಕುರಿತು ಅಗಸ್ಟ್‌ 26ರಂದು ಶಹರ ಪೊಲೀಸ್ ಠಾಣೆಯಲ್ಲಿ ಬಿದರಿ ಗ್ರಾಮದ ರವಿ ಖರೆ, ಹುನ್ನೂರು ಗ್ರಾಮದ ಬಸವರಾಜ ಬಡಿಗೇರ, ಮುತ್ತೂರ ಗ್ರಾಮದ ಗೀರೀಶ ಭಾಂಗಿ, ಚಿನ್ನಪ್ಪ ಕುಂದರಗಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. 

ಕಳೆದ ಎರಡು ತಿಂಗಳಿಂದ ಆರೋಪಿಗಳು ತಲೆಮರೆಸಿಕೊಂಡು ನೀರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು ಜಾಮೀನು ಸಿಕ್ಕಿರಲಿಲ್ಲ. ಕಳೆದ ಎರಡು ದಿನಗಳಲ್ಲಿ ವಿವಿಧ ಕಡೆಗೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ಸಿಬ್ಬಂದಿ ಕಾರ್ಯವಿರ್ವಹಿಸುತ್ತಿರುವಾಗ ಆಸತ್ರೆಗೆ ಬಂದು ರೋಗಿಗಳನ್ನು ಪರೀಕ್ಷಿಸುತ್ತಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಉದ್ದೇಶ ಪೂರ್ವಕವಾಗಿ ಸಂಬಂಧವಿಲ್ಲದ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಮಾಹಿತಿ ವಿವರಗಳನ್ನು ಕೇಳುವುದು. ಆಸ್ಪತ್ರೆಯಲ್ಲಿ ತಮಗೆ ಬೇಕಾದ ರೋಗಿಯನ್ನು ತಂದು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ವೈದ್ಯರು ತಪಾಸಣೆ ಮಾಡುತ್ತಿಲ್ಲ ಎಂದು ಆರೋಪಿಸುವುದು ಹಾಗೂ ವೈದ್ಯರಿಗೆ ಸಾರ್ವಜನಿಕರ ಮುಂದೆ ನಿಂದನೆ ಮಾಡುತ್ತಿದ್ದರು ಎಂದು ದೂರು ದಾಖಲಾಗಿತ್ತು. 

ವೈದ್ಯರ, ಸಿಬ್ಬಂದಿ ದೂರವಾಣಿ ಸಂಖ್ಯೆ ಹಾಗೂ ವೈಯಕ್ತಿಕ ಆಸ್ತಿ ವಿವರದ ಮಾಹಿತಿ, ರೋಗಿಗಳ ಚಿಕಿತ್ಸೆ ವಿವರ ಹಾಗೂ ಸಿಬ್ಬಂದಿ ರಜೆ ವಿವರ ಮಾಹಿತಿ ನೀಡಲು ಒತ್ತಾಯಿಸುತ್ತಾರೆ. ಇದರಿಂದ ಸಿಬ್ಬಂದಿ ಮಾನಸಿಕವಾಗಿ ಕುಗ್ಗಿದ್ದು ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ, ನೂತನ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಇತ್ತಿಚೆಗೆ ಪ್ರಾರಂಭಿಸಿದ್ದಾರೆ. ಆ ಆಸ್ಪತ್ರೆಗೆ ಇನ್ನು ವೈದ್ಯರನ್ನು ನಿಯೋಜನೆ ಮಾಡಿಲ್ಲ. ಅಲ್ಲಿರುವ ವೈದ್ಯರನ್ನೇ ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯದೊತ್ತಡವಿದ್ದರು ಕೆಲಸವನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ತಿಳಿಸಿದ್ದಾರೆ. 

ವಿವಿಧ ಇಲಾಖೆಗಳಲ್ಲಿ ಮಾಹಿತಿ ಕೇಳಿ ಅಧಿಕಾರಿಗಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಅವರ ಮೇಲೆ ಪ್ರಕರಣ ದಾಖಲಾಗಿತ್ತು ಆ ಪ್ರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಾಗರಾಜ ಖಿಲಾರೆ

ಶಹರ ಠಾಣೆಯ ಪಿಎಸ್‌ಐ



ಸುದ್ದಿ ಓದಿ