ವಿಠ್ಠಲ ರುಕ್ಮಿಣಿ ಮಂದಿರದ ಶಿಖರ ನಿರ್ಮಾಣಕ್ಕೆ ಅಡಿಗಲ್ಲು
ಲೋಕದರ್ಶನ ವರದಿ
ಕಾಗವಾಡ 03: ಐನಾಪುರ ಪಟ್ಟಣದ ವಿಠ್ಠಲ ರುಕ್ಮಿಣಿ ಮಂದಿರದ ಶಿಖರ ನಿರ್ಮಾಣ ಅಡಿಗಲ್ಲು ಸಮಾರಂಭ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರು ನೆರವೇರಿಸಿದರು.
ಬುಧವಾರರಂದು ಐನಾಪುರ ಪಟ್ಟಣದಲ್ಲಿ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ, ಪಾಂಡುರಂಗ ವಿಠ್ಠಲನ ದರ್ಶನವನ್ನು ಪಡೆದರು. ಸಮಾರಂಭದ ಸಾನಿಧ್ಯ ಐನಾಪುರ - ಕೃಷ್ಣಾಕಿತ್ತೂರ ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿಗಳ ವಹಿಸಿದರು. ಶಿಖರ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಅಡಿಗಲ್ಲು ನೆರವೇರಿಸಿದರು.
ಶಾಸಕ ಶ್ರೀಮಂತ ಪಾಟೀಲರು ಮಾತನಾಡಿ ಐನಾಪುರ ಪಟ್ಟಣದಲ್ಲಿ ವಿಠ್ಠಲ ರುಕ್ಮಿಣಿ ಮಂದಿರದ ಕಟ್ಟಡವನ್ನು ಬಹಳ ವ್ಯವಸ್ಥಿತವಾಗಿ ಕಟ್ಟಿದಿರಿ, ಅದೇ ರೀತಿ ಶಿಖರ ನಿರ್ಮಾಣ ಕಾಮಗಾರಿಗೆ ಇವತ್ತು ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಲಾಗಿದ್ದು, ಶಿಖರ ನಿರ್ಮಾಣ ಕಾಮಗಾರಿಯು ಯಶಸ್ವಿಯಾಗಿ ಪೂರ್ಣಗೊಳ್ಳಲಿ, ಈ ಶಿಖರ ನಿರ್ಮಾಣಕ್ಕೆ ನಮ್ಮಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದೆಂದರು.
ಐನಾಪುರ ಪಟ್ಟಣದ ಸ್ಥಳೀಯ ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೊತದಾರ, ರತನ ಪಾಟೀಲ, ದೇವಸ್ಥಾನದ ಕಮಿಟಿಯ ಸದಸ್ಯರಾದ ಭರತ ಲೊಂಡೆ, ಸುಭಾಷ ಲೊಂಡೆ, ಅಣ್ಣಾಸಾಹೇಬ ಜಾಧವ, ವಿಶವನಾಥ ಖಟಾವೆ, ಅನಿಲ ನಿಕಮ, ವಿಠಲ ಖಟಾವೆ, ಅನಿಲ ಡೊಂಗರೆ, ನಿತಿನ ಕಾಕಡೆ, ಗುರುರಾಜ ಮಡಿವಾಳರ, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದರು.