ಧಾರವಾಡ - ಹುಬ್ಬಳ್ಳಿ

ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ

ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ

ಧಾರವಾಡ 12: ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿಯ ಅಂಗ ಸಂಸ್ಥೆಯಾದ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ ಝಾನ್ಸಿಯ 63 ನೇ  ದಿನಾಚರಣೆಯನ್ನು  ದಕ್ಷಿಣ ಭಾರತೀಯ ಪ್ರಾಂತೀಯ ಕೇಂದ್ರವಾದ ಧಾರವಾಡದಲ್ಲಿ ದಿ. 8 ರಂದು ಆಚರಿಸಲಾಯಿತು.  

ಕಾರ್ಯಕ್ರಮಕ್ಕೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಸಂಶೋಧನಾ ನಿರ್ದೇಶಕರು ಹಾಗೂ ಕೃಷಿ ವಿಸ್ತರಣಾ ನಿರ್ದೆಶಕ ಡಾ. ಬಿ.ಡಿ. ಬಿರಾದಾರ ಅವರು ಮುಖ್ಯ ಅಥಿತಿಯಾಗಿ ಮಾತನಾಡಿ, ರಾಜಸ್ಥಾನದ ಉದಾಹರಣೆ ಕೊಡುತ್ತಾ ಮೇವಿನ ಗಿಡಗಳ ಮಹತ್ವವನ್ನು ತಿಳಿಸಿದರು ಮತ್ತು ಸುಸ್ಥಿರ ಕೃಷಿಯ ಮಹತ್ವದ ಬಗ್ಗೆ ಮಾತನಾಡಿದರು. 

ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯ ನೀರ್ದೇಶಕ ಡಾ. ರಾಜೇಂದ್ರ ಪೊದ್ದಾರ  ಅವರು ಮಾತನಾಡಿ, ಸಂಸ್ಥೆ ಹಾಗೂ ಸಮಾಜಕ್ಕೂ ಹೊಂದಾಣಿಕೆ ಮತ್ತು ಬಾಂಧವ್ಯ ಇರಬೇಕು ಮತ್ತು  ರೈತರು ಮುಕ್ತವಾಗಿ ಸಂಸ್ಥೆಗಳನ್ನು ಸಂರಿ​‍್ಕಸುವ ವ್ಯವಸ್ಥೆ ಇರಬೇಕು ಎಂದು ಹೇಳಿದರು. 

ಧಾರವಾಡ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ್ ಅವರು ಮಾತನಾಡಿ, ವಾಣಿಜ್ಯ ಬೆಳೆಗಳತ್ತ ರೈತರು ಹೆಚ್ಚು ಆಕರ್ಷಿತರಾಗಿವುದರಿಂದ ಮೇವಿನ   ಕೊರತೆ ಉಂಟಾಗುತ್ತದೆ ಎಂದು ತಿಳಿಸಿದರು.  

ಕರ್ನಾಟಕದ ಹಾಲು ಮಹಾಮಂಡಲ ಧಾರವಾಡ ಹಾಗೂ ಪಶು ವೈದ್ಯಕೀಯ ತರಬೇತಿ ಕೇಂದ್ರ ಧಾರವಾಡ ಇವರುಗಳಿಗೆ ಮಾನ್ಯತೆ ಪ್ರಶಸ್ತಿಯನ್ನು ನೀಡಲಾಯಿತು.  

ಇದೇ ಸಂಧರ್ಬದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಮಾತನಾಡಿದ ಡಾ. ಆರ್‌.ಡಿ. ಪಾಟೀಲ, ಜಂಟಿ ನೀರ್ದೆಶಕರು, ಕರ್ನಾಟಕ ಹಾಲು ಮಹಾಮಂಡಲಿ, ಧಾರವಾಡ ಅವರು ಹೈನುಗಾರಿಕೆಯಲ್ಲಿ ಮೇವಿನ ಬೆಳೆಯ ಮಹತ್ವದ ಬಗ್ಗೆ ತಿಳಿಸಿದರು. ಡಾ. ಬಿ.ಪಿ ಹೀರೆಮಠ, ಉಪ ನೀರ್ದೆಶಕರು ಪಶು ವೈದ್ಯಕೀಯ ತರಬೇತಿ ಕೇಂದ್ರ, ಧಾರವಾಡ ಅವರು ಪ್ರಶಸ್ತಿ ಸ್ವೀಕರಿಸುತ್ತಾ ಪಶುಗಳ ಆರೋಗ್ಯದ ಮಹತ್ವವನ್ನು ತಿಳಿಸಿದರು. 

ಇದೇ ಸಂದರ್ಭದಲ್ಲಿ ಧಾರವಾಡದ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಕೇಂದ್ರದ ಕುರಿತಾದ ಹಾಗೂ ತೋಟಗಳಲ್ಲಿ ಮೇವಿನ ಬೆಳೆ ಬೆಳೆಯುವ ನುಡಿಚಿತ್ರಣಗಳನ್ನು ಮತ್ತು “ಮೇವಿನ ಮಾಹಿತಿ” ಎಂಬ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಕೆಲವು ಪ್ರಗತಿಪರ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

 ಅಧ್ಯಕ್ಷೀಯ ಭಾಷಣ ಮಾಡಿದ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಸೋಧನಾ ಸಂಸ್ಥೆ ಧಾರವಾಡದ ಮುಖ್ಯಸ್ಥರಾದ ಡಾ. ಕೆ.ಶ್ರೀಧರ ಅವರು ಮಾತನಾಡುತ್ತಾ ಜಾನುವಾರುಗಳನ್ನು ಹೊಂದಿರುವ ಪ್ರತಿ ರೈತರು ಮೇವಿನ ಬೆಳೆ ಬೆಳೆಯಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. 

ಡಾ. ನಾಗರತ್ನ ಬಿರಾದಾರ ಅತಿಥಿಗಳನ್ನು ಸ್ವಾಗತಿಸಿದರು, ಡಾ. ಬಿ,ಜಿ ಶಿವಕುಮಾರ ವಂದನಾರೆ​‍್ಣ ಮಾಡಿದರು ಹಾಗೂ ಡಾ. ನರೇಂದ್ರ ಕುಲಕರ್ಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. 


ಸುದ್ದಿ ಓದಿ