ರೋಟರಿ ಮಾಜಿ ಚೇರ್ಮನ್ ವಿ.ಸಿ. ಪಾಟೀಲ್ ಇನ್ನಿಲ್ಲ
ರಾಣೇಬೆನ್ನೂರು :ಕೆ.ಹೆಚ್. ಬಿ. ಕಾಲೋನಿ,ವಿನಾಯಕ ನಗರದ ನಿವಾಸಿ,- ಬುಡಪನಹಳ್ಳಿ ಗ್ರಾಮದ ವೀರನಗೌಡ ಸಿ, ಪಾಟೀಲ (79) ಅವರು ರವಿವಾರ ಬೆಳಗಿನ ಜಾವ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು.
ಮೃತ ವ್ಹಿ.ಸಿ.ಪಾಟೀಲ್ ಅವರುಬಿಇ ಸಿವಿಲ್ ಇಂಜಿನಿಯರ್, ಟಾಗೋರ್ ಶಿಕ್ಷಣ ಸಂಸ್ಥೆಯ ಚೇರ್ಮನ್ ರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕ್ರಷರ್ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ,ರಾಜ್ಯಉಪಾಧ್ಯಕ್ಷರಾಗಿದ್ದರು.ಹಲವು ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಸದಸ್ಯರಾಗಿ, ಮಾರ್ಗದರ್ಶಕರಾಗಿ, ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕವಾಗಿ ರಾಜಕೀಯ ರಂಗವನ್ನು ಸಹಾ.ಪ್ರವೇಶ ಪಡೆದಿದ್ದ ಅವರು, 2018 ರಲ್ಲಿ ವಿಧಾನ ಸಭೆಗೆ ಒಂದು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಮೃತರ ನಿಧನಕ್ಕೆ, ಶಾಸಕ ಅರುಣ ಕುಮಾರ್ ಪೂಜಾರ್, ಕೆ ಬಿ ಕೋಳಿವಾಢ, ಬಸವರಾಜ ಹುಲ್ಲತ್ತಿ, ಎಂ ಜಿ ಪಾಟೀಲ್, ಡಾ ಬಸವರಾಜ ಕೇಲಗಾರ, ಡಾ ಪ್ರವೀಣ್ ಖನ್ನೂರ್, ಜಿ.ಜಿ.ಹೊಟ್ಟಿಗೌಡ್ರ, ವ್ಹಿ. ಪಿ.ಲಿಂಗನಗೌಡ್ರ, ಸೇರಿದಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ತಮ್ಮ ತೀರ್ವ ಸಂತಾಪ ಸೂಚಿಸಿದ್ದಾರೆ