ಸೇವಾ ನಿವೃತ್ತ ಗುರುಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ರಮೇಶ ಬೊಸನೂರ
ಇಂಡಿ 22: ಶಿಕ್ಷಕರಾಗಿ ಸೇವಾ ನಿವೃತ್ತ ಹೊಂದಿರುವ ಮಶ್ಯಾಕಸಾಬ ಬೇಗ ಹಾಗೂ ಅವರ ಧರ್ಮಪತ್ನಿಯನ್ನು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ರಮೇಶ್ ಬೊಸನೂರ ಅವರು ಸನ್ಮಾನಿಸಿ ಗೌರವಿಸಿದರು.ನಂತರ ಮಾತನಾಡಿದ ಅವರು ನಮ್ಮ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ. ಗುರುಗಳೇ ನಮ್ಮನ್ನು ಅಜ್ಞಾನದಿಂದ ಹೊರಗೆ ತೆಗೆಯುತ್ತಾರೆ. ಶಿಕ್ಷಕರು ನಮ್ಮ ಗುರುಗಳೇ ಆಗಿದ್ದಾರೆ. ಅದಕ್ಕೆ ನಾವು ಗುರುಪೂರ್ಣಿಮೆಯ ದಿನದಂದು ಗುರುಗಳಾದ ಮಶ್ಯಾಕಸಾಬ ಬೇಗ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನ ಮಾಡಿದ್ದು ತುಂಬಾ ಸಂತೋಷವಾಗಿದೆ.ಬಾಲ್ಯದಲ್ಲಿ ತಾಯಿ-ತಂದೆಯರು ನಮಗೆ ಪ್ರತಿಯೊಂದು ವಿಷಯ ಕಲಿಸುತ್ತಾರೆ, ಆದರೆ ಶಿಕ್ಷಕರು ನಮಗೆ ಅನೇಕ ವಿಷಯಗಳ ಬಗ್ಗೆ ಜ್ಞಾನ ನೀಡುತ್ತಾರೆ.ಅವರು ಇತಿಹಾಸ ಕಲಿಸುತ್ತಾರೆ, ಅದರಿಂದ ಅವರು ನಮ್ಮಲ್ಲಿ ರಾಷ್ಟ್ರಾಭಿಮಾನ ಜಾಗೃತಿ ಮೂಡಿಸುತ್ತಾರೆ.ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸವನ್ನು ನಾವು ನೀವು ಎಲ್ಲರೂ ಮಾಡಬೇಕು.ಇವತ್ತು ಮಕ್ಕಳಿಗೆ ಡಾಕ್ಟರ್, ಇಂಜಿನಿಯರಿಂಗ್ ಮಾಡಿಸಿ ಅವರು ಬೇರೆ ನೌಕರಿ ಮಾಡುತ್ತಾರೆ ಆದರೆ ಇತ್ತ ತಂದೆ -ತಾಯಿ ವೃದ್ಧ ಆಶ್ರಯದಲ್ಲಿ ಕಾಲ ಕಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಹಾಗೂ ಮಶ್ಯಾಕಸಾಬ ಬೇಗ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಸುಭಾಷ್ ಹಿಟ್ನಹಳ್ಳಿ ಮಾತನಾಡಿ ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಿಸುವ ಕೆಲಸ ಸದಾ ಮಾಡುತ್ತಾರೆ.
ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ಶಿಕ್ಷಕನ ವೃತ್ತಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ನೂರಹಮ್ಮದ , ಬಿಜೆಪಿ ಮುಖಂಡರಾದ ಯಾಸ್ಮಿನ್ ಬಾನು ನಾಯ್ಕೊಡಿ,ಸಚೀನ ಇಂಡಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಎಮ್ ಆರ್ ಬೇಗ,ಬಿ ಬಿ ಮಕಣಿ, ಬಸವರಾಜ ಪೂಜಾರಿ, ಮರುಳಸಿದ್ದಪ್ಪ ಖಸ್ಕಿ, ರೈಮಾನ್ ಬೇಗ್, ಕಲ್ಲಪ್ಪ ಖಸ್ಕಿ, ಬಾಳಪ್ಪ ಡೊಂಬರ, ಚಿನ್ನುಸಾಹುಕಾರ ಮೇತ್ರಿ, ಈಶ್ವರ ಪಾಟೀಲ,ಸುರೇಶ ಟೆಂಗಳೆ, ಶ್ರೀಮಂತ ಹಿರೇಕುರಬರ, ಶಶಿಕಾಂತ ಪೂಜಾರಿ, ಕಲ್ಲಪ್ಪ ಖಸ್ಕಿ, ಸಿದ್ದಾರ್ಥ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಶೋಕ ಮಾಸ್ತರ ಹೀರೆಕುರಬ ಕಾರ್ಯಕ್ರಮ ನಿರೂಪಿಸಿದರು.