ಸಿರುಗುಪ್ಪ

ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧೀಜಿ ಜನ್ಮದಿನ

ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧೀಜಿ ಜನ್ಮದಿನ

ಸಿರುಗುಪ್ಪ11:  ಬದುಕಿನಲ್ಲಿ ಎದುರಾಗುವ ಕತ್ತಲೆಗೆ ಹೆದರಬಾರದು ಗಾಢ ಕತ್ತಲೆ ಇದ್ದರಷ್ಟೇ ನಕ್ಷತ್ರಗಳು  ಪ್ರಖರವಾಗಿ ಬೆಳಗುವವು ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬೆಂಗಳೂರು ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯ ಸಮಾಜ ಸುಧಾರಕ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಹೇಳಿದರು.

 ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನವರ 121ನೇ ಜನ್ಮದಿನ ಹಾಗೂ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಮಾಜಿ ಅಧ್ಯಕ್ಷೆ ಹಿರಿಯ ನಾಯಕಿ ಸೋನಿಯಾ ಗಾಂಧೀಜಿ ಅವರ 77ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಕಾಂಗ್ರೆಸ್ಸಿನ ಆಡಳಿತ ಭದ್ರಾ ಬುನಾದಿ ಹಾಕಿ ಎಲ್ಲಾ ಜನರೊಡನೆ ನಾಂದಿ ಹಾಡಿದವರು ಪ್ರಾಮಾಣಿಕತೆ ನಿಷ್ಠೆ ದೂರ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಸೇವೆ ಮಾಡಿದವರು ರೈತರಿಗಾಗಿ ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು ಎಲ್ಲರಿಗೂ ಅವರು ಆದರ್ಶವಾಗಿದ್ದರು ಅವರ ಕ್ರಿಯಾ ಯೋಜನೆಗಳು ರಾಜ್ಯಕ್ಕೆ ಅಪಾರ ಕೊಡುಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷೆ ಹಿರಿಯ ನಾಯಕಿ ಸೋನಿಯಾ ಗಾಂಧಿಜೀ ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿ ದೇಶಕ್ಕಾಗಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮೌಲ್ಯ ದಾರಿತ ರಾಜಕಾರಣಿ ಮಾಡಿದ್ದಾರೆ ಮನಸ್ಸು ಮಾಡಿದ್ದರೆ ಅವರು ದೇಶದ ಪ್ರಧಾನ ಮಂತ್ರಿ ಗಳಾಗಬಹುದಿತ್ತು ಆದರೆ ಅವರು ಅದನ್ನು ಒಪ್ಪಲಿಲ್ಲ ಎಂದಿಗೂ ಸೋನಿಯಾ ಗಾಂಧಿಯವರು ಅಧಿಕಾರದ ಹಿಂದಿ ಹೋಗಲಿಲ್ಲ  ಅಧಿಕಾರ ಅವರ ಹಿಂದೆ ಬಂದಿದೆ ಸರಳತೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸೋನಿಯಾ ಗಾಂಧೀಜಿ ಅವರದು ಎಂದು ಅಬ್ದುಲ್ ನಬಿಯವರು ತಿಳಿಸಿದರು ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಭಾಷಾ, ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಎ ಎಸ್ ಅಮಿರ್ ಬಾಷಾ, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಡಿ ಹಾಶಿಮ್, ಕಾಂಗ್ರೆಸ್ ಮುಖಂಡರಾದ ಹಾಜಿ ಟಿ ಜಿ ಅಬ್ದುಲ್ ಗನಿ ಡಬಲ್ ಬಾಂಡ್, ಸಾಮಾಜಿಕ ಕಾರ್ಯಕರ್ತರಾದ ಮೋಹಮದ್ ಇಬ್ರಾಹಿಂ, ಹಾಜಿ ಖಾಲಿ ಚೀಲ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಎ ಮೊಹಮ್ಮದ್ ರಫೀಕ್,ಎ ಮೊಹಮ್ಮದ್ ನೌಶಾದ್ ಅಲಿ, ಹಂಡಿ ಹುಸೇನ್ ಸಾಬ್, ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ತಾಲೂಕ ಅಧ್ಯಕ್ಷ ಬಿಕೆ ಅಲ್ಲಾಭಕ್ಷಿ, ಡಾ ಮೊಹಮ್ಮದ್ ಅಲಿ, ಡಿ ಆಲಂ ಬಾಷಾ ಇತರರಿದ್ದರು 

ಸುದ್ದಿ ಓದಿ