ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮ ದಿನಾಚರಣೆ
ರಾಣೇಬೆನ್ನೂರು 21: ಸಮಾನತೆ, ಭೂಸುಧಾರಣೆ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತಂದ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು. ಅವರು ತೀರಾ ಸಂಕಷ್ಟದಲ್ಲಿದ್ದ ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದು ನಗರಸಭಾ ಸದಸ್ಯ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ಹೇಳಿದರು. ಅವರು ಮಂಗಳವಾರ ಇಲ್ಲಿನ ತಾಪಂ ಸಭಾಭವನದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯಿತಿ, ನಗರ ಸಭೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ..ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು., ಭೂ ಸುಧಾರಣೆ ಕಾಯಿದೆ ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಕಲ್ಪನೆಗೆ ಕಾರಣಿಭೂತರಾದವರು ದೇವರಾಜ ಅರಸು. ಅವರು ದೀನ ದಲಿತರ, ಶೋಷಿತರ ವರ್ಗದವರ ಏಳ್ಗೆಗಾಗಿ ಶ್ರಮಿಸಿದ ರಾಜ್ಯದ ನಿಜ ಅರಸರಾಗಿದ್ದರು ಎಂದರು.
ಜನರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅರಸು ಅವರ ಆದರ್ಶಗಳನ್ನು ನಾವೇಲ್ಲರೂ ಮೈಗೂಡಿಸಿಕೊಳ್ಳಬೇಕು. ಇಂದಿನ ರಾಜಕೀಯ ಕ್ಷೇತ್ರದಲ್ಲಿ ಆಗುವಂತಹ ಭ್ರಷ್ಟಚಾರ ಹಾಗೂ ಇನ್ನೀತರೆ ಲೋಪದೋಶಗಳನ್ನು ನಾವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೇವೆ. ಒಂದು ತಕ್ಕಡಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಾಗೂ ಇನ್ನೊಂದು ತಕ್ಕಡಿಯಲ್ಲಿ ಅರಸು. ನಂತರ ಬಂದ ಮುಖ್ಯಮಂತ್ರಿಗಳನ್ನು ತಾಳೆ ಹಾಕಿದರೆ ಅರಸು ಅವರ ಸಮನಾಗಿ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದರು.
ಪ್ರೊ. ಕಾಂತೇಶ ಅಂಬಿಗೇರ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಯಾರು ಮರೆಯಲಾಗದ ಇತಿಹಾಸ ಸೃಷ್ಟಿಸಿದ ವ್ಯಕ್ತಿ ದೇವರಾಜ ಅರಸು ಅವರು, 1973 ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಗಟ್ಟಿ ನಿರ್ಧಾರ ತೆಗೆದುಕೊಂಡ ಕೀರ್ತಿ ಇವರಿಗೆ ಸಲ್ಲುತ್ತಿದೆ. ಭೂಸುಧಾರಣೆಯ ಹರಿಕಾರ, ಕ್ರಾಂತಿಕಾರಿ ನಾಯಕ, ಬಾಲ್ಯದಿಂದಲೇ ನಾಯಕತ್ವ ಸ್ವಭಾವ ಹೊಂದಿದ್ದ, ಹಿಂದುಳಿದ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ ಹಾಗೂ ಕರಾಳ ದಿನ ತಳ್ಳುತ್ತಿದ್ದ ಜನರಿಗೆ ಬೆನ್ನಲುಬಾಗಿ ನಿಂತಿದ್ದರು ಎಂದರು. ತಹಸೀಲ್ದಾರ ಆರ್.ಎಚ್. ಭಾಗವಾನ, ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪ್ರಭಂಧಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದ ಯೋಧ ಶಿವಪ್ಪ ವಡರೇರ ನಿಧನಕ್ಕೆ ಮೌನಾಚರಣೆ ಸಲ್ಲಿಸಿ ಶ್ರದ್ದಾಂಜಲಿ ಅರ್ಿಸಲಾಯಿತು. ತಾಪಂ ಇಓ ಪರಮೇಶಪ್ಪ, ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ, ಬಿಸಿಎಂ ಇಲಾಖೆ ವಿಸ್ತೀರ್ಣಾಧಿಕಾರಿ ವಿ.ಎಸ್. ಹಿರೇಮಠ, ಕೊಟ್ರೇಶಪ್ಪ ಎಮ್ಮಿ, ಹನುಮಂತಪ್ಪ ಕಬ್ಬಾರ, ಪ್ರಭಾಕರ್ ಶಿಗ್ಲಿ, ಮಲ್ಲಿಕಾರ್ಜುನ್ ಸಾವಕ್ಕಳವರ, ಪಿ.ವಿ. ಮಠದ, ಶಾಂತಪ್ಪ ಸಾವಕಾರ, ಹೆಚ್.ಹೆಚ್. ಓಲೇಕಾರ್, ಪ್ರಸಾದ ಆಲದಕಟ್ಟೆ, ಎಸ್.ಕೆ. ಹಾವನೂರ, ವೈ.ಎ. ಕೊರವರ, ಮಂಜುನಾಥ್ ಎಂ.ಕೆ, ಗಣೇಶ್ ಕಾಯಕದ, ಯಶೋದಮ್ಮ ಅಂತರವಳ್ಳಿ, ಮಹೇಶ್ ಲಮಾಣಿ, ನೀಲಪ್ಪ ಹೊನ್ನತ್ತಿ, ಜಯಪ್ಪ ಮಾವಿನತೋಪ, ನಿಂಗಪ್ಪ ಲಮಾಣಿ, ಚಂದ್ರ್ಪ ಪಾರಮ್ಮನವರ ಸೇರಿದಂತೆ ಮತ್ತಿತರರು ಇದ್ದರು. ಕಲಾವಿದೆ ರೂಭಿಯಾ ನದಾಪ್ ದೇಶಭಕ್ತಿ ಗೀತೆ ಹಾಡಿದರು. ಯಕ್ಲಾಸಪುರದ ಜನನಿ ಜನ್ಮಭೂಮಿ ಸಂಘದ ಕಲಾವಿದರಾದ ಪರಶುರಾಮ ಬಣಕಾರ,ರಾಜು ಸುರ್ವೆ ಶಿವಕುಮಾರ ಜಾಧವ್ ತಂಡದವರು ನಾಡಗೀತೆ, ರೈತಗೀತೆ ಹಾಡಿದರು.