ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ 80ನೇ ಜನ್ಮ ದಿನೋತ್ಸವ
ರಾಣೇಬೆನ್ನೂರ02: ಎಪಿಎಂಸಿ ವರ್ತಕರ ಸಂಘದ ಭವನದಲ್ಲಿ ಬುಧವಾರ ಕರ್ನಾಟಕ ಸರ್ಕಾರದ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ 80ನೇ ವರ್ಷದ ಹುಟ್ಟುಹಬ್ಬದ ಸಮಾರಂಭವು ಅವರ ಅಭಿಮಾನಿ ಬಳಗವು ಆಯೋಜಿಸಿತ್ತು.ಅಪಾರ ಜನ ಸಮುದಾಯದ ಮಧ್ಯೆ ಅವರ ಅಭಿಮಾನಿಗಳ ಬಳಗದ ಪರವಾಗಿ ಮುಖ್ಯ ಸಚೀತಕ, ಸಲೀಂ ಅಹಮ್ಮದ್ ಅವರು, ಅಭಿನಂದಿಸಿ ಸನ್ಮಾನಿಸಿ, ಶುಭ ಕೋರಿದರು. ಕಾಂಗ್ರೆಸ್ ಮುಖಂಡರಾದ,ಬಿ. ಆರ್. ಯಾವಗಲ್, ಡಿ. ಆರ್. ಪಾಟೀಲ್,ಪ್ರೊ,ಐ.ಜಿ. ಸನದಿ, ಅಜ್ಜಮ್ ಪೀರ್ ಖಾದ್ರಿ, ಬಿ. ಎನ್. ಶಿವಣ್ಣವರ, ಡಿ. ಎಂ. ಸಾಲಿ, ಮಂಜನ ಗೌಡ ಪಾಟೀಲ, ಸೋಮಣ್ಣ ಬೇವಿನಮರದ, ಶೇರುಖಾನ್ ಕಾಬೂಲಿ,ರುಕ್ಮಿಣಿ ಸಾಹುಕಾರ, ಬಸವರಾಜ್ ಸವಣೊರ, ನೀಲಕಂಠಪ್ಪ ಕುಸಗೂರ, ಶೇಕಪ್ಪ ಹೊಸಗೌಡ್ರ, ಪಿ. ಜೆ. ಮರಿಯಮ್ಮನರ, ಬಿ..ಎಸ್.. ಮರದ,ಶಶಿಧರ ಬಸೇನಾಯ್ಕರ, ಇರ್ಫಾನ್ ದಿಡಗೂರ,ಸೇರಿದಂತೆ, ಹಾಲಿ ಮಾಜಿ ಶಾಸಕರು, ಸಚಿವರು, ಪಕ್ಷದ ಮುಖಂಡರು ನಗರ ಮತ್ತು ತಾಲೂಕಿನ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.