ಇಂಡಿ

ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆ ಸಂಸತ್ತು ರಚನೆ

ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆ ಸಂಸತ್ತು ರಚನೆ

ಇಂಡಿ 25:  ತಾಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ವಿಧ್ಯಾ ವಿಕಾಸ ಸಂಸ್ಥೆಯ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆ ಸಂಸತ್ತು ರಚನೆ ಮಾಡಲಾಯಿತು. ಪ್ರೌಢಶಾಲೆಯ ಮಕ್ಕಳಿಗೆ ಚುಣಾವಣೆ ಎಂದರೆ ಸಂಭ್ರಮವೋ ಸಂಭ್ರಮ.ಬೆಳಗ್ಗೆಯಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭ ಮಾಡಲಾಯಿತು ವಿದ್ಯಾರ್ಥಿ -ವಿದ್ಯಾರ್ಥಿನಿಯರು ತಮ್ಮ ತಮ್ಮ ಸಹ ಪಾಪಿಗಳನ್ನು ಕರೆದುಕೊಂಡು ನಾಮಪತ್ರ ಸಲ್ಲಿಸಿದರು. ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿ ಎಂದು ಶಾಲೆಯ ಶಿಕ್ಷಕಿ ಹಾಗೂ ಶಾಲೆ ಸಂಸತ್ತು ರಚನೆ ಚುನಾವಣೆ ಅಧಿಕಾರಿ ಅಂಬಿಕಾ ಇಂಡಿ ತಿಳಿಸಿದರು.ನಂತರ ತಮ್ಮ ತಮ್ಮ ನಾಯಕ -ನಾಯಕಿಯ ಮತ ನೀಡುವಂತೆ ತಮ್ಮ ತಮ್ಮ ಗೆಳೆಯರನ್ನು ಮನವೊಲಿಸುವ ಪ್ರಯತ್ನ ಮಾಡಿದರು, ಕೊನೆಗೆ ಮಧ್ಯಾಹ್ನ ಮೂರು ಗಂಟೆಗೆ ಮತದಾನ ಆರಂಭ ಮಾಡಲಾಯಿತು.  

ವಿಧ್ಯಾರ್ಥಿ- ವಿದ್ಯಾರ್ಥಿನಿಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿರದರು.ನಂತರ ಚುನಾವಣೆ ಫಲಿತಾಂಶ ಪ್ರಕಟಿಸಲಾಯಿತು. 

ಈ ಮಾತನಾಡಿದ ಆ ಸಂಸ್ಥೆಯ ಅಧ್ಯಕ್ಷ ಅಭಿನವ ರಾಚೋಟೇಶ್ವರ ಶ್ರೀಗಳು ಮಕ್ಕಳೂ ಸಹ ದೇಶದ ಪ್ರಜೆಗಳಾಗಿದರಿಂದ ಶಾಲಾ ಕಲಿಕೆಯ ಜೊತೆ ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು.  

ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ  ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ ಎಂದು ಹೇಳಿದರು.ಚುನಾವಣೆ ಅಧಿಕಾರಿಗಳಾಗಿ ಶಾಲೆಯ ಗುರುಮಾತೆಯರಾದ  ಪ್ರೇಮಾ ಗಿಣ್ಣಿ, ಎ ಎಸ್ ಡಂಗಿ, ಎಸ್ ಎಂ ಪೂಜಾರಿ ಹಾಗೂ ಶಿಕ್ಷರಾದ ಆರ್ ಆರ್ ರೂಗಿ , ಎಸ್ ಎನ್ ಮಕಣಿ, ಸೇರಿದಂತೆ ಶಾಲೆಯ ಗುರುಗಳು ಹಾಗೂ ಗುರುಮಾತೆಯರು ಅವರು ಕಾರ್ಯನಿರ್ವಹಿಸಿದರು. 


ಸುದ್ದಿ ಓದಿ