ಎಸ್ಡಿಎಮ್ಸಿ ರಚನೆ: ರಾಜಕೀಯ ಮುಖಂಡರ ಸ್ವಪ್ರತಿಷೆಯಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಭೆ ಮುಂದೂಡಿಕೆ
ಲೋಕದರ್ಶನ ವರದಿ
ಯರಗಟ್ಟಿ 06: ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ 4 ವರ್ಷಗಳಿಂದ ರಾಜಕೀಯ ಪಕ್ಷಗಳ ಪ್ರವೇಶವಾಗಿ ತಮ್ಮ ಪ್ರತಿಷ್ಠೆಗೋಸ್ಕರ ಎಸ್ಡಿಎಮ್ಸಿ ರಚನೆ ಆಗುತ್ತಿಲ್ಲ. ಇದರಿಂದ ಸರಕಾರಿ ಪ್ರಾಥಮಿಕ ಹಿರಿಯ ಮಾದರಿ ಕನ್ನಡ ಶಾಲೆಗೆ ಎಸ್ಡಿಎಮ್ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಗುರುವಾರ ದಿ.4 ರಂದು ನಡೆಸಲಾಯಿತು.
ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಅಧಿಕಾರಿಗಳು ಮಾಡಿರುವ ಲಿಸ್ಟ್ ಬೇಡ ಎಂದು ಪಾಲಕರು ಗ್ರಾಮಸ್ಥರು ಪಟ್ಟು ಹಿಡಿದುಕೊಂಡು ಚೀಟಿ ಎತ್ತುವ ಮೂಲಕ 18 ಸದಸ್ಯರ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್ ಎಂದು ವೈಮನಸ್ಯದಿಂದ ಮತ್ತೆ ವಾಗ್ದಾಳಿಗೆ ಇಳಿದು ನಂತರ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿದ ನಂತರ ಸಭೆಯನ್ನು ಮುಂದೂಡಲಾಯಿತು.