ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯ
ಲೋಕದರ್ಶನ ವರದಿ
ಸಿರುಗುಪ್ಪ 21 : ಯಾವುದೇ ಸಮಾಜದವರು ಹಕ್ಕುಗಳಿಗಾಗಿ ಹೋರಾಟ ಮಾಡಲಿ ಅವರನ್ನು ಗೌರವದಿಂದ ಕಾಣಬೇಕಾದದ್ದು ಸರ್ಕಾರದ ಕರ್ತವ್ಯ ಸಂವಿಧಾನ ದತ್ತವಾಗಿ ಬೇಡ ಜಂಗಮರಿಗೆ ದೊರೆಯಬೇಕಾದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನೀಡಬೇಕು ಎಂದು ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯಸ್ವಾಮಿ, ಹಚ್ಚೊಳ್ಳಿ ಮುತ್ತಿನ ಪೆಂಡೆ ಮಠದ ಶಿವ ರುದ್ರ ಮುನಿ ಸ್ವಾಮೀಜಿ ಒತ್ತಾಯಿಸಿದರು.
ತಾಲ್ಲೂಕು ಬೇಡ ಜಂಗಮರ ಒಕ್ಕೂಟ ಹೋರಾಟ ಸಮಿತಿಯ ಸದಸ್ಯ ವೀರಭದ್ರ ಶರ್ಮ ಮಲ್ಲಯ್ಯ ಸ್ವಾಮಿ, ಬಸವರಾಜ ಸ್ವಾಮಿ ಅವರು ಮಾತನಾಡಿ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಉದ್ಯೋಗ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ರಾಜ್ಯ ಜಂಗಮರ ಎಸ್ಸಿ ಜಾತಿ ಪ್ರಮಾಣ ಪತ್ರಕ್ಕೆ ಸತ್ಯ ಪ್ರತಿ ಪಾದನಾ ಸತ್ಯಾಗ್ರಹಕ್ಕೆ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು ಸಿರುಗುಪ್ಪ ತಾಲ್ಲೂಕಿನ ಬೇಡ ಜಂಗಮ ಒಕ್ಕೂಟ ಸಮುದಾಯದ ಮುಖಂಡರ ಸಮ್ಮುಖದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು