ಸುಶಾಂತ್ ಪ್ರಕರಣ; ಸತತ ಮೂರನೇ ದಿನ ಸಿಬಿಐ ಇಂದ ರಿಯಾ ವಿಚಾರಣೆ
ಮುಂಬೈ,
ಆಗುಸ್ಟ್ 30: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ
ಮೃತನ ಪ್ರೇಯಸಿ ಹಾಗೂ ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ ಸತತ ಮೂರನೇ ದಿನ ವಿಚಾರಣೆ ನಡೆಸಿತು.
ರಿಯ ವಿರುದ್ಧ ಸುಶಾಂತ್ ಅನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪ ಹೊರಿಸಲಾಗಿದೆ. ಸುಶಾಂತ್ ಜೂ.14ರಂದು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ರಿಯಾ ಮತ್ತು ಅವರ ತಮ್ಮನನ್ನು ಸಿಬಿಐ ತಂಡ ಡಿಆರ್ಡಿಓ ಅತಿಥಿ ಗೃಹಕ್ಕೆ ಕರೆಸಿ ವಿಚಾರಣೆ ನಡೆಸಿದ್ದಾರೆ. ರಿಯಾ ಅವರನ್ನು ಭಾನುವಾರ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ರಿಯಾಮತ್ತು ಇತರರ ನಡುವೆ ಸುಶಾಂತ್ ಕುರಿತು ನಡೆದ ವಾಟ್ಸ್ ಆ್ಯಪ್ ಚರ್ಚೆ ಮಾಧ್ಯಮಗಳಿಗೆ ಬಹಿರಂಗಗೊಂಡ ನಂತರ, ಪ್ರಕರಣದಲ್ಲಿ ಮಾದಕ ವ್ಯಸನದ ಸೇವನೆ ಒಳಗೊಂಡಿರುವ ಅನುಮಾನ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಬಾಲಿವುಡ್ನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಕುರಿತು ಕೂಡ ಹಲವು ಸ್ಫೋಟಕ ವಿಷಯಗಳ ಕುರಿತು ಚರ್ಚೆ ಆರಂಭಗೊಂಡಿದೆ.
ಈ ಕುರಿತು ತನಿಖೆ ನಡೆಸಲು ದೆಹಲಿಯ ಮಾದಕ ವ್ಯಸನಗಳ ನಿಯಂತ್ರಣ ಮಂಡಳಿ (ಎನ್ಸಿಬಿ)ಯ ಮೂರು ಸದಸ್ಯರು ಮುಂಬೈಗೆ ಆಗಮಿಸಿದ್ದರು.