ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿ ಜೀವನ ಉತ್ತಮ ದಾರಿಯಲ್ಲಿ ಸಾಗಿ : ದುಂಡಿಗೌಡ್ರ
ಶಿಗ್ಗಾವಿ 02: ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ನಮ್ಮ ಕೆಲಸಗಳಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದ ಪ್ರಲ್ಹಾದ ಜೋಷಿಯವರು ಸೇರಿದಂತೆ ಅಭಿಮಾನಿಗಳು ಮತ್ತು ಜನತೆಯ ಬೆಂಬಲವಿದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಶಿಗ್ಗಾವಿ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ 23-24 ನೇ ಸಾಲಿನ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರುನಮ್ಮದು ಭಾವೈಕ್ಯತೆಯ ನಾಡು, ಸಾದು ಸಂತರು ನಡೆದಾಡಿದ ಪುಣ್ಯ ಭೂವಿ ಶಿಗ್ಗಾವಿ, ಎಲ್ಲ ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಉತ್ತಮ ದಾರಿಯಲ್ಲಿ ಸಾಗುತ್ತದೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಅವರಿಂದ ಇನ್ನೂ ಹೆಚ್ಚಿನ ಸಾಧನೆಯಾಗುತ್ತದೆ, ಗಣ್ಯರಿಂದ ಸನ್ಮಾನಿತಗೊಂಡರೆ ಎತ್ತರಕ್ಕೆ ಬೆಳೆಯುತ್ತಾರೆ, ಆದರಿಂದ ಇಂತಹ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ನಡೆಸಿಕೊಂಡು ಬಂದಿದೆ ನಮ್ಮ ಕಾರ್ಯಕ್ಕೆ ಬೆಂಬಲ ನೀಡಿದವರೆಲ್ಲರಿಗೂ ಧನ್ಯವಾದಗಳನ್ನು ಅರ್ಿಸುತ್ತೆವೆ ಎಂದರು.
ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ ವಿವೇಕಾನಂದ ನಂಬಿಕೆ ನಮ್ಮ ಮೇಲಿದೆ, ಭಾರತ ಮತ್ತೊಮ್ಮೆ ವಿಶ್ವಗುರುವಿನ ಸ್ಥಾನದಲ್ಲಿಡುವಂತೆ ನಡೆಯುವದು ಯುವ ಪಿಳಿಗೆ ಮೇಲಿದೆ,
ಯುವ ಪೀಳಿಗೆ ಮೇಲೆ ಜವಾಬ್ದಾರಿ ಇದೆ, ತಂದೆ ತಾಯಿಯ ಕನಸ್ಸು ನನಸಾಗಿಸುವಂತೆ ನಮ್ಮ ಗುರಿ ಹೊಂದಬೇಕು, ಜೀವನದಲ್ಲಿ ಅಘಾದ ಕನಸ್ಸುಗಳನ್ನು ಕಾಣಬೇಕು, ಎಲ್ಲ ಮನೋಬಲಗಳನ್ನು ಗಟ್ಟಿಗೋಳಿಸಿಕೊಂಡು ಧೈರ್ಯವಂತನಾಗಿರಬೇಕು, ಗುರಿಯನ್ನು ಮುಟ್ಟುವಂತ ಬದುಕು ನಮ್ಮದಾಗಬೇಕು, ಶಿಸ್ತು ಇಲ್ಲದೆ ಏನು ಸಾಧಿಸಲಾಗದು, ಸಾಧಕರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು, ಉಪಕಾರದಿಂದ ಜೀನವ ಸಾರ್ಥಕವಾಗುತ್ತದೆ, ಶಿಕ್ಷಣವಂತರಾಗಬೇಕು, ಶಿಕ್ಷಣ ಕಷ್ಟದಿಂದ ಪಾರು ಮಾಡುವ ಮಾರ್ಗವಾಗಿದೆ, ಯುವ ಪೀಳಿಗೆ ಸೊಂಬೆರಿತನದಿಂದ ಹೊರಬರಬೇಕು, ಪೋಷಕರು ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ಎಂದರು.
ಬಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಭಾರತ ಸೇವಾ ಸಂಸ್ಥೆಯಿಂದ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ, ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ, ಜೊತೆಗೆ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಹೀಗೆ ಕಾರ್ಯ ಮುಂದುವರಿಯಲಿ ಎಂದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಧನ ಸಹಾಯದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಕಾಪೂರ ಅರಲೆಳೆಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಮಣಕಟ್ಟಿಯ ವಿಶ್ವಾರಾದ್ಯ ಮಹಾಸ್ವಾಮಿಗಳು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಮುಖಂಡರಾದ ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ಉಮೇಶ ಗೌಳಿ, ಅರ್ಜುನ ಹಂಚಿನಮನಿ, ತಿಪ್ಪಣ್ಣ ಸಾತಣ್ಣವರ, ಫಕ್ಕೀರ್ಪ ಕುಂದೂರ, ಬಸವರಾಜ ನಾರಾಯಣಪೂರ, ಶಂಕರಗೌಡ ಪೋಲಿಸಗೌಡ್ರ ಸೇರಿದಂತೆ ಭಾರತ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.