ಬೈಲಹೊಂಗಲ

ಡಾ.ಅಂಬೇಡ್ಕರ ತತ್ವ ಆದರ್ಶಗಳನ್ನು ಪಾಲಿಸಿ: ಸಂಪಗಾವಿ

ಡಾ.ಅಂಬೇಡ್ಕರ ತತ್ವ ಆದರ್ಶಗಳನ್ನು ಪಾಲಿಸಿ: ಸಂಪಗಾವಿ

ಬೈಲಹೊಂಗಲ 07: ಸಂವಿಧಾನದ ಆಶಯಗಳನ್ನು ಈಡೆರಿಸುತ್ತಾ  ಡಾ.ಅಂಬೇಡ್ಕರ ಅವರ ತತ್ವ ಆದರ್ಶಗಳನ್ನು  ಪಾಲಿಸುವ ಮೂಲಕ ನಿಜವಾದ ಗೌರವ ಸಲ್ಲಿಸೋಣ ಎಂದು ತಾಪಂ.ಇಓ ಸುಭಾಷ ಸಂಪಗಾವಿ ಹೇಳಿದರು. 

ಅವರು ಪಟ್ಟಣದ ತಾಪಂ. ಸಭಾಭವನದಲ್ಲಿ ಸೋಮವಾರ ಜೈಭೀಮ ಸಂಘರ್ಷ ಸಮಿತಿ ಆಶ್ರಯದಲ್ಲಿ ನಡೆದ  ಡಾ.ಅಂಬೇಡ್ಕರ ಅವರ ಪರಿನಿರ್ವಾಣ ದಿನದ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ, ಉಪಾಧ್ಯಕ್ಷ ಸುರೇಶ ಕೆಳಗೇರಿ, ತಾಲೂಕಾ ಅಧ್ಯಕ್ಷ ಪ್ರಕಾಶ ಮಾದಿಗರ, ವಿಜಯ ಕೋಟಗಾರ, ರವಿ ಪವಾರ, ಕರೆಪ್ಪ ಉಡಿಕೇರಿ, ಭರಮಪ್ಪ ಮಾದರ, ಲಕ್ಶ್ಮಣ ಸಾಲಹಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು. 

ಪಟ್ಟಣದ ಅಂಬೇಡ್ಕರ ನಗರದ ಅಂಬೇಡ್ಕರ  ಉದ್ಯಾನವದಲ್ಲಿ  ಸೋಮವಾರ ಜೈಭೀಮ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಡಾ.ಅಂಬೇಡ್ಕರ ಅವರ ಪರಿನಿರ್ವಾಣ ದಿನದ ಅಂಗವಾಗಿ  ಅಂಭೇಡ್ಕರ ಅವರ ಪುತ್ಥಳಿಗೆ ಗೌರವ ಸಮರ​‍್ಿಸಿದರು. 


ಸುದ್ದಿ ಓದಿ