ಶಿಗ್ಗಾವ್

ಜಾನಪದ ವಿಶ್ವವಿದ್ಯಾಲಯ ಜನರ ಬಳಿ ಹೋಗಬೇಕು: ಸಿ.ಎಂ ಬೊಮ್ಮಾಯಿ

ಜಾನಪದ ವಿಶ್ವವಿದ್ಯಾಲಯ ಜನರ ಬಳಿ ಹೋಗಬೇಕು: ಸಿ.ಎಂ ಬೊಮ್ಮಾಯಿ

ಲೋಕದರ್ಶನ ವರದಿ

ಶಿಗ್ಗಾವಿ 24: ಜಾನಪದ ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶ ಸ್ಥಳೀಯ ಜನಪದ ಕಲೆಗಳನ್ನು  ಪುನರುಜ್ಜೀವನಗೊಳಿಸಿ ಶ್ರೀಮಂತಗೊಳಿಸುವುದಾಗಿದೆ. ಹಾಗೆಯೇ ಇಡೀ ಕರ್ನಾಟಕದ ಜಾನಪದ ಅಧ್ಯಯನ ನಡೆಸಿ ಅದರ ಮಜಲುಗಳನ್ನು ವಿಸ್ತರಿಸುವುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಕಲಾ ಭವನ ಮಾತೋಶ್ರಿ ಗಂಗಮ್ಮ ಎಸ್ ಬೊಮ್ಮಾಯಿ ಗ್ರಾಮ ಕರ್ನಾ ಟಕ ವಸ್ತು ಸಂಗ್ರಹಾಲಯ ಉದ್ಘಾಟನೆ ಹಾಗೂ ಶೈಕ್ಷಣಿಕ ಭವನ ಬ್ಲಾಕ್ 2 ಕಟ್ಟಡದ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.

 ಜಾನಪದ ನಮಗೆ ಏಕೆ ಅವಶ್ಯಕವೆಂದರೆ ಮನುಷ್ಯನ ಸವಾರ್ಂಗೀಣ ವಿಕಾಸ ಜಾನಪದಿಂದ ಸಾಧ್ಯ ಎಲ್ಲದರಲ್ಲೂ ನಾವು ಜಾನಪದವನ್ನು ಕಾಣಬಹುದು. ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸ ಜಾನಪದ ವಿಶ್ವವಿದ್ಯಾಲಯದಿಂದ ಆಗಬೇಕು. ಅಷ್ಟೆ ಅಲ್ಲದೆ ದೇಶ ವಿದೇಶಗಳ ಜಾನಪದ ಸಂಸ್ಕೃತಿಯ ಕುರಿತ ಜ್ಞಾನವು ಜಾನಪದ ವಿವಿಯಲ್ಲಿ ದೊರೆಯಬೇಕು.

ಜಾನಪದ ವಿವಿಯು ಬೇರೆ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದೆ.

ಜಾನಪದ ವಿವಿಯು ಹಂತ ಹಂತವಾಗಿ ಬೆಳೆಯುತ್ತಿದೆ ಇದರ ಬೆಳವಣಿಗೆಗೆ ಬೇಕಾಗುವ ಎಲ್ಲ ಸಹಕಾರವನ್ನು ನಮ್ಮ ಸರ್ಕಾರದಿಂದ ನೀಡಲಾಗುವುದು.

ಅದರ ಭಾಗವಾಗಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಕಲಾಭವನ ಮಾತೋಶ್ರಿ ಗಂಗಮ್ಮ ಬೊಮ್ಮಾಯಿ ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯದ ಉಧ್ಘಾಟನೆ ಹಾಗೂ ಶೈಕ್ಷಣಿಕ ತರಗತಿಗಳ ಕೊಠಡಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಿದ್ದು.

ಮುಂದಿನ ದಿನಗಳಲ್ಲಿ ಇಲ್ಲಿ ನಿರ್ಮಾಣವಾಗಿರುವ ಕಲಾ ಭವನದಲ್ಲಿ ಈ ಭಾಗದ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗಬೇಕು ಎಲ್ಲ ಕಲೆಗಳ ಪ್ರದರ್ಶನ ದಿನನಿತ್ಯ ನಡೆಯಬೇಕು ನಮ್ಮ ಭಾಗದ ಭಾಗದ ಕಲೆಗಳಾದ ದೊಡ್ಡಾಟ ಸಣ್ಣಾಟಗಳಿಂದ ಹಿಡಿದು ಇವತ್ತಿನ ಎಲ್ಲ ಕಲೆಗಳು ಪ್ರದರ್ಶನವಾಗಬೇಕು ಈಗಾಗಲೇ ಭಾಗಶಃ ಕೆಲಸ ಮುಗಿದೆ ಪನರ್ಿಚೆರ್ ವ್ಯವಸ್ಥೆಯನ್ನು 15 ದಿನಗಳ ಒಳಗಾಗಿ ಮಾಡಲಾಗುವುದು. ಹಾಗೆಯೇ ವಿಶೇಷವಾಗಿ ಇಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂ ನಮ್ಮ ಗ್ರಾಮೀಣ ಸಂಸ್ರ್ಕತಿಯನ್ನು ಬಿಂಬಿಸುವ ವಸ್ತುಗಳ ಪ್ರದರ್ಶನ ಹಾಗೂ ದೇಶ ವಿದೇಶಗಳ ವಿಶಿಷ್ಟ ವಸ್ತುಗಳನ್ನು ಸಂಗ್ರಹಿಸಿ ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನ ನೋಡಲು ಬರುವ ಹಾಗೆ ಮಾಡುವ ಉದ್ದೇಶವಿದೆ ಅದಕ್ಕಾಗಿಯೇ ಕೇಂದ್ರ ಸರ್ಕಾರ ಒಂದು ಕೋಟಿ ಹಾಗೂ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿಗಳ ಅನಮೋದನೆ ನೀಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜಾನಪದ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗದ ದೃಷ್ಟಿಯಿಂದ ವಿಶೇಷ ಆರ್ಥಿಕ ನೆರವನ್ನು ನೀಡಲಾಗುವುದು.

ಇದರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡುವದು. ಈಗಿನ ಕುಲಪತಿಗಳು ಉತ್ತಮ ಕೆಲಸಗಾರರಾಗಿದ್ದು ವಿಶ್ವವಿದ್ಯಾಲಯದ ಏಳಿಗೆಗೆ ಅವರು ಸಹ ಹಗಲಿರುಳು ಶ್ರಮವಹಿಸುತ್ತಿದ್ದಾರೆ ಅವರಿಗೆ ಅಭಿನಂದನೆಗಳು.

ಜಾನಪದ ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ ಅವಶ್ಯಕತೆ ಇಲ್ಲ ಜನಸಮುದಾಯ ಹಳ್ಳಿಗಳೆ ಇದರ ಕ್ಯಾಂಪಸ್ ಆ ನಿಟ್ಟಿನಲ್ಲಿ ಇಲ್ಲಿನ ಅಧ್ಯಾಪಕರು ಹಳ್ಳಿಗಳತ್ತ ಜನರತ್ತ ಹೋಗಿ ಅವರ ಸಂಸ್ಕೃತಿ ಪರಂಪರೆಗಳನ್ನು ಅಧ್ಯಯನ ನಡೆಸಬೇಕು. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಸಂಶೋಧನೆ ವಿಚಾರಗೋಷ್ಠಿ ವಿಚಾರಣ ಸಂಕೀರಣಗಳನ್ನು ಏರ್ಪಡಿಸಿ ದೇಶ ವಿದೇಶಗಳಿಂದ ವಿದ್ವಾಂಸರು ಬಂದು ಪತ್ರಿಕೆ ಮಂಡನೆ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯ ಜಗತ್ತಿಗೆ ಪರಿಚಯವಾಗಲು ಸಾಧ್ಯ ಆ ಬಗೆಯಲ್ಲಿ ಚಿಂತನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ನನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ಜಾನಪದ ವಿವಿಯಯು ಎತ್ತರದಲ್ಲಿ ನಿಲ್ಲುತ್ತದೆ ಮುಂದಿನ ದಿನಗಳಲ್ಲಿ ವಿವಿಯ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಮ್.ಭಾಸ್ಕರ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್ ಎಮ್ ಸಾಲಿ ಡಾ.ಬಸವರಾಜ ಕೆಲಗಾರ ಡಿ.ಎಸ್.ಮಾಳಗಿ ಶಿವಾನಂದ ಮ್ಯಾಗೇರಿ ಶ್ರೀಕಾಂತ ದುಂಡಿಗೌಡ್ರ ತಿಪ್ಪಣ್ಣ ಸಾತಣ್ಣವರ ನವೀನ ಸವಣೂರ ಪ್ರಸಾದ ಸುರಗಿಮಠ ಕಿರಣ ಅವರಾದಿ ಸರ್ಕಾರದ ವಿವಿಧ ನಿಗಮಂಡಳಿಗಳ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು. ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಹಾಗೂ ತಂಡದವರು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು.ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಕಾರ್ಯಕ್ರಮ ನಿರೂಪಿಸಿದರು.

 

ಸುದ್ದಿ ಓದಿ