ಶಿಗ್ಗಾವ್

ಜನಪದ ಗೀತೆಗಳು ಜೀವನ ಮೌಲ್ಯವನ್ನು ಕಲಿಸುತ್ತಿದ್ದವು: ಶರೀಫ

ಜನಪದ ಗೀತೆಗಳು ಜೀವನ ಮೌಲ್ಯವನ್ನು ಕಲಿಸುತ್ತಿದ್ದವು: ಶರೀಫ

ಶಿಗ್ಗಾವಿ 09: ಹುಟ್ಟಿನಿಂದ ಸಾವಿನವರೆಗೂ ಜನಪದ ಗೀತೆಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಬಂದಿವೆ ಇವುಗಳಿಗೆ ಎಂದು ಸಾವಿಲ್ಲ ಹರಿಯುವ ನೀರಿದ್ದಂತೆ ಎಂದು ಜನಪದ ಕಲಾವಿದ ಶರೀಫ ಮಾಕಪ್ಪನವರ ಹೇಳಿದರು. 

ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ರಂಭಾಪುರಿ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ 2 ನೇ ದಿನದ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಮತ್ತು ಆಧುನಿಕತೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ವಿಶೇಷವಾಗಿ ಜನಪದ ಗೀತೆಗಳು ಶ್ರಮ ಸಂಸ್ರ್ಕತಿಯ ಪ್ರತೀಕವಾಗಿ ಬೆಳೆದು ಬಂದವುಗಳು ಜನಪದ ಕಥೆಗಾದೆ ಒಗಟು ಒಡಪುಗಳ ಮೂಲಕ ಮಕ್ಕಳಿಗೆ ನೈತೀಕ ಮೌಲ್ಯಶಿಕ್ಷಣ ದೊರೆಯುತ್ತಿತ್ತು ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ನಾಟಕ ಸಣ್ಣಾಟ ದೊಡ್ಡಾಟಗಳಲ್ಲಿ ಸಾಮರಷ್ಯದ ಬದುಕನ್ನು ನಾವು ಕಾಣುತ್ತಿದ್ದೆವು. 

ಕಾರ್ಯಕ್ರಮಉದ್ಘಾಟನೆ ಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಮ್ಯಾಗೇರಿ ಮಾತನಾಡಿ ಇಂದಿನ ಮಕ್ಕಳು ಸಾಹಿತ್ಯವನ್ನು ರಚಿಸುವ ಹವ್ಯಾಸ ರೂಡಿಸಿಕೊಳ್ಳಬೇಕು ಅದುಕಥೆ ಕವನ ಚುಟುಕು ಯಾವುದಾದರೂ ಆಗಿರಬಹುದು ಇಂತಹ ಹವ್ಯಾಸಗಳಿಂದ ನಮ್ಮಲ್ಲಿ ಸೃಜನಾತ್ಮಕ ಮನೋಭಾವ ಬೆಳೆಯುತ್ತದೆ ಎಂದರು. 

ಉಪನ್ಯಾಸಕ ಡಾ.ಗಿರಿಗೌಡ ಅರಳಿಹಳ್ಳಿ ಮಾತನಾಡಿ ಜನಪದ ಸಾಹಿತ್ಯಕ್ಕೂ ಮತ್ತು ಶಿಷ್ಟ ಸಾಹಿತ್ಯಕ್ಕೂತುಂಬಾ ವ್ಯತ್ಯಾಸವಿದೆ ಜನಪದ ಸಾಹಿತ್ಯ ಅಲಿಖಿತವಾಗಿ ಬಾಯಿಂದ ಬಾಯಿಗೆ ಬಂದಿರುವಂತಹದ್ದು ಅನಕ್ಷರಸ್ಥರು ರಚನೆ ಮಾದಿದ್ದರು ಆ ಸಾಹಿತ್ಯದಲ್ಲಿ ಒಂದು ಮೌಲ್ಯಯುತವಾದ ಅಂಶಗಳು ನಮಗೆ ಕಾಣುತ್ತವೆ ತಂದೆ-ತಾಯಿ ಸಹೋದರತ್ವದ ಪ್ರೀತಿ ಬಾಂಧ್ಯವ್ಯಗಳನ್ನು ಜನಪದ ತ್ರಿಪದಿಗಳಲ್ಲಿ ಜನಪದರು ಅದ್ಭ್ಬುತವಾಗಿ ತಿಳಿಸಿಕೊಡುತ್ತಾರೆ ಹಾಗಾಗಿ ಅಧುನಿಕ ಸಂದರ್ಭದಲ್ಲಿ ಸಹ ಜನಪದ ಸಾಹಿತ್ಯವು ಮನುಷ್ಯನಿಗೆ ಅವಶ್ಯಕವಾದವುಗಳು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಸದಸ್ಯ ಚನ್ನಪ್ಪ ಶಿ ಚಿನ್ನಪ್ಪನವರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚನ್ನವೀರಯ್ಯ ಹಿರೇಮಠ ಶೇಖಪ್ಪ ಮಾಕಾಪುರ ನಾಗಪ್ಪ ಹೊಂಡದಕಟ್ಟಿ ಬಸಪ್ಪ ಗುಂಜಾಳ ಎಸ್‌.ಡಿ.ಎಮ್‌.ಸಿ ಸದಸ್ಯರಾದ ಶೋಭಾ ಕುರಡಿಕೇರಿ ನೇತ್ರಾವತಿ ಭಜಂತ್ರಿ ಪ್ರಕಾಶ ಹಾಗೂ ಇತರರು ಉಪಸ್ಥಿತರಿದ್ದರು. 

ಎನ್‌.ಎಸ್‌.ಎಸ್‌.ಸ್ವಯಂ ಸೇವಕರು ಪ್ರಾರ್ಥನೆ ಹಾಗೂ ಎನ್‌.ಎಸ್‌.ಎಸ್‌.ಗೀತೆ ಹಾಡಿದರು. ಎನ್‌.ಎಸ್‌.ಎಸ್‌. ಕಾರ್ಯಾಕ್ರಮಾಧಿಕಾರಿ ಉಪನ್ಯಾಸಕ ಶಿವಯ್ಯ ಪೂಜಾರ ಪ್ರಾಸ್ತಿವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ