ಜನಪದ ಸಾಹಿತ್ಯವೆಂದರೆ ಹಳ್ಳಿಯ ಜನಸಾಮಾನ್ಯರ ಜೀವನ ವಿಧಾನ
ಲೋಕದರ್ಶನ ವರದಿ
ಶಿಗ್ಗಾವಿ 10: ಜನಪದ ಸಾಹಿತ್ಯವೆಂದರೆ ಹಳ್ಳಿಯ ಜನಸಾಮಾನ್ಯರ ಜೀವನ ವಿಧಾನ, ಆಚಾರ ವಿಚಾರ ನಂಬಿಕೆ ಸಂಪ್ರದಾಯಗಳ ಒಂದು ಜ್ಞಾನವಾಗಿದೆ ಎಂದು ಕರ್ನಾಟಕ ಜಾನಪದ ವಿವಿಯ ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಹೇಳಿದರು.
ತಾಲೂಕಿನ ಕಡಹಳ್ಳಿ ಗ್ರಾಮದಲ್ಲಿ ರಂಭಾಪುರಿ ಪದವಿ ಪೂರ್ವ ಮಹಾವಿದ್ಯಾಲಯ ಹಮ್ಮಿಕೊಂಡ ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಜನಪದ ಸಾಹಿತ್ಯವು ಜನರಿಗೆ ಮಾನವೀಯ ಮೌಲ್ಯಗಳನ್ನು ನೈತಿಕ ವಿಚಾರಗಳನ್ನು ಬಿತ್ತುವ ಪ್ರಯತ್ನ ಮಾಡುತ್ತಿದ್ದವು ಹಾಗೆಯೇ ಮಕ್ಕಳಲ್ಲಿ ಭಯ, ಆತಂಕ, ಒತ್ತಡ, ಮಾನಸಿಕ ತೊಂದರೆಯಿಂದ ಮುಕ್ತಗೊಳಿಸಲು ಸಹಾಯಕವಾಗಬಲ್ಲದು ಹಾಗಾಗಿ ನಮ್ಮ ಜನಪದ ಸಾಹಿತ್ಯದ ಪರಂಪರೆಯನ್ನು ಇವತ್ತಿನ ಪೀಳಿಗೆಗೆ ಕಲಿಸುವ ಮತ್ತು ಜನಪದ ಸಾಹಿತ್ಯವನ್ನು ಜನಪದ ಸಂಸ್ಕೃತಿಯನ್ನು ಉಳಿಸುವ ಅನಿವಾರ್ಯತೆ ಇದೆ ಎಂದರು.
ಉಪನ್ಯಾಸಕ ಎಸ್.ವಿ.ಕುಲಕರ್ಣಿ ಮಾತನಾಡಿ ಜನಪದ ಸಾಹಿತ್ಯವು ನಮ್ಮ ಹಳ್ಳಿಯ ಜನರ ಸಾಹಿತ್ಯವಾಗಿದೆ ತಾಯಿ ಮಗಳ ತವರು ಪ್ರೀತಿ ಸಹೋದರ ಸಹೋದರಿಯರ ಬಾಂಧವ್ಯವನ್ನು ಹಾಡುಗಳ ಮೂಲಕ ಸರಳವಾಗಿ ಜನಪದರು ಕಟ್ಟಿಕೊಡುತ್ತಿದ್ದರು ಹಾಗಾಗಿ ಜನಪದ ಸಾಹಿತ್ಯ ನಿತ್ಯನಿರಂತರವಾಗಿರುವಂತದ್ದು ಎಂದರು.
ಪಿಎಸ್ಐ ಮಹಾದೇವ ಯಲಿಗಾರ ಮಾತನಾಡಿ ಟಿ.ವಿ ಮತ್ತು ಧಾರಾವಾಹಿಗಳು ನಮ್ಮ ಸಂಸ್ರ್ಕತಿಯನ್ನು ನಾಶ ಮಾಡುತ್ತಿವೆ ಯುವಕರಿಗೆ ತಪ್ಪ್ಪು ಸಂದೇಶ ನೀಡುತ್ತಿವೆ ಹಾಗಾಗಿ ಎಂ.ಎ.ಪಿ.ಎಚ್.ಡಿ ಮಾಡಿದ ಅಕ್ಷರಸ್ಥರಿಂದ ಜನಪದವನ್ನು ಉಳಿಸಲು ಸಾಧ್ಯವಿಲ್ಲ ಅದು ನಮ್ಮ ರೈತಾಪಿ ವರ್ಗದಿಂದ ನಮ್ಮ ಹಳ್ಳಿಯಿಂದ ಜನಪದ ಉಳಿಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಬಿಜೆಪಿ ಅಧ್ಷಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಜನಪದ ಸಾಹಿತ್ಯವು ನಮ್ಮ ಹಿರಿಯರ ಜ್ಞಾನ ಇಂದು ಅವರ ಜ್ಞಾನಕ್ಕೆ ಮಣ್ಣನೆ ಸಿಗುತ್ತಿಲ್ಲ ಅಂತಹ ಪರಂಪರೆಯನ್ನು ಸಂಸ್ರ್ಕತಿಯನ್ನು ನಾವು ಮರೆಯುತ್ತಿದ್ದೇವೆ ಅಂತಹ ಸಂಸ್ಕೃತಿಯನ್ನು ಉಳಿಸುವಂತ ಪ್ರಯತ್ನವನ್ನು ರಂಭಾಪುರಿ ಕಾಲೇಜಿನವರು ಎನ್.ಎಸ್.ಎಸ್ ಕಾರ್ಯಕ್ರಮದ ಮೂಲಕ ಜನಪದ ಸಾಹಿತ್ಯದ ಅರಿವನ್ನು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಮಲ್ಲಿಕಾರ್ಜುನ ಹಡಪದ ಮಾತನಾಡಿದರು, ಎನ್.ಎಸ್.ಎಸ್. ಅಧಿಕಾರಿ ಶಿವಯ್ಯ ಪೂಜಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಲಾವಿದರಾದ ಗೋವಿಂದಪ್ಪ ತಳವಾರ, ಶರೀಫ ಮಾಕಪ್ಪನವರ, ಶಿವಾನಂದ ಮ್ಯಾಗೇರಿ, ಪಿ.ಎಸ್.ಐ ಮಹಾದೇವ ಯಲಿಗಾರ ಅವರನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಕಿರಪ್ಪ ಹುಬ್ಬಳ್ಳಿ, ಚನ್ನಪ್ಪಕರಲಿಂಗಪ್ಪನವರ, ಶಿವಪ್ಪ ಕೊಪ್ಪದ, ಗೋವಿಂದಗೌಡ ಕಂಠೆಣ್ಣವರ, ಗ್ರಾಮ ಪಂಚಾಯತ ಸದಸ್ಯ ಬಸನಗೌಡ ರಾಮನಗೌಡ್ರ, ಶಂಕರ ಮುಂದಿನಮನಿ, ವಿರುಪಾಕ್ಷಪ್ಪ ಮುಂದಿನಮನಿ, ಮಲ್ಲೆಶಪ್ಪ ಭಜಂತ್ರಿ, ಉಪನ್ಯಾಸಕ ಎಮ್.ಎಸ್.ಸಿದ್ದಪ್ಪನವರ ಹಾಗೂ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಪ್ರಾರ್ಥನೆಗೀತೆ ಹಾಡಿದರು ವಿದ್ಯಾರ್ಥಿ ಕವಿತಾ ಹುಡೇದ ನಿರೂಪಿಸಿದರು, ವಿದ್ಯಾರ್ಥಿ ನಿಂಗನಗೌಡ ವಂದಿಸಿದರು