ಗುಳೇಗುಡ್ಡ

ಯುವ ಪೀಳಿಗೆಗೆ ಜನಪದ ಕಲೆಗಳ ತರಬೇತಿ ಅಗತ್ಯ

ಯುವ ಪೀಳಿಗೆಗೆ ಜನಪದ ಕಲೆಗಳ ತರಬೇತಿ ಅಗತ್ಯ


ಗುಳೇದಗುಡ್ಡ,ನ.2:  ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಕಲೆಗಳಿವೆ. ಇಂದಿನ ಯಾಂತ್ರಿಕ ಯುಗದಲ್ಲಿ ಕಲಾ ಪ್ರದರ್ಶನ ನೀಡುವ ಕಲಾವಿದರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಲೆಗಳ ಪುನರುಜ್ಜೀವನಗೊಳಿಸಲು ಹೊಸ ತಲೆಮಾರಿನ ಯುವಕರಿಗೆ  ಜನಪದ ಕಲೆಗಳ ತರಬೇತಿ ಅಗತ್ಯವಾಗಿದೆ ಎಂದು ಪ್ರೊ.ಚಂದ್ರಶೇಖರ್ ಹೆಗಡೆ ಹೇಳಿದರು. 

    ಸೋಮವಾರ ಅವರು ಜರುಗಿದ ಗೌರಿ ಗಣೇಶ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸಂಘ ಕೆರೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಹಾಗೂ ಕ್ರೀಡಾ ಯುವ ಸಬಲೀಕರಣ ಇಲಾಖೆ, ನೆಹರೂ ಯುವ ಕೇಂದ್ರ ಬಾಗಲಕೋಟೆ ಇವರ ಸಹಯೋಗದಲ್ಲಿ ಜರುಗಿದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಕೇಂದ್ರಿತವಾದ ಜನಪದ ಕಲೆಗಳು, ಗ್ರಾಮೀಣ ಸಂವೇದನೆಯನ್ನು ಬಿಂಬಿಸುವ ಕಲೆಗಳು ಅಳಿವಿನಂಚಿನಲ್ಲಿವೆ. ಅವುಗಳ ಪುನರುಜ್ಜೀವನದ ಅವಶ್ಯಕತೆ ಇದೆ. ಇಂತಹ ಕಲಾ ಪರಂಪರೆಯನ್ನು ಕೆರೂರಿನ ಗೌರಿ ಗಣೇಶ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸಂಘ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಹೊಸ ತಲೆಮಾರಿನ ಪೀಳಿಗೆಗೆ ಕಲಾ ಪರಂಪರೆಯ ತರಬೇತಿ ನೀಡುವ ಮೂಲಕ ಜನಪದ ಕಲಾ ಸಂಸ್ಕೃತಿಯನ್ನು ಉತ್ತುಂಗಕ್ಕೆ ಒಯ್ಯಬೇಕಾಗಿದೆ ಎಂದರು. 

    ಗೌರಿ ಗಣೇಶ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷೆ ಪವಿತ್ರಾ ಜಕ್ಕಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಕಲೆಯಲ್ಲಿ ನಾವು ಪರಿಣಿತಿಯನ್ನು ಸಾಧಿಸಲು ಗುರುವಿನ ಮಾರ್ಗದರ್ಶನ ಮುಖ್ಯವಾಗಿದೆ ಎಂದರು. 

    ಮರಡಿಮಠದ ಅಕ್ಕಮಹಾದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಗೌರವಿಸಲಾಯಿತು. ಕೆರೂರಿನ ಗುರುಪುಟ್ಟರಾಜ ಜ್ಞಾನ ಜ್ಯೋತಿ ಸಂಘದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ತಿಪ್ಪಣ್ಣ ಮಂಗಳೂರು, ಕಲಾವಿದ ಶಂಕರ್ ಮುಂದಿನಮನಿ, ಬಸವರಾಜ ಸಿಂದಗಿಮಠ, ಹೇಮಂತ ಲಮಾಣಿ, ಅಂಖಂಡೇಶ್ವರ ಪತ್ತಾರ ಹಾಗೂ ಶಿವಯ್ಯ ಮಾಲಗತ್ತಿಮಠ, ಶಂಕರ ಸಣಪಾ, ಚಿದಾನಂದ ಕಾಟವಾ ಉಪಸ್ಥಿತರಿದ್ದರು. 


ಸುದ್ದಿ ಓದಿ