ಶಿಗ್ಗಾವ್

ಜನಪದ ಕಲೆ ಬದುಕನ್ನು ರೂಪಿಸುವ ಕಲೆ: ಮ್ಯಾಗೇರಿ

ಜನಪದ ಕಲೆ ಬದುಕನ್ನು ರೂಪಿಸುವ ಕಲೆ: ಮ್ಯಾಗೇರಿ

ಲೋಕದರ್ಶನ ವರದಿ

ಶಿಗ್ಗಾವಿ :  ಜನಪದ ಕಲೆಗಳು ಬಧುಕಿನ ಜೊತೆಗೆ ಬೆರೆತು ಬೆಳೆದು  ಬಂದವೆ. ಈ ಕಲೆಗಳು ಮಾನವೀಯ ಮೌಲ್ಯಗಳನ್ನು ನೈತಿಕ ಶಿಕ್ಷಣವನ್ನು ಕೊಡುವ ಕೆಲಸ ಮಾಡುತ್ತಿದ್ದವು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದ ವಿರಕ್ತಮಠದ ಆವರಣದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ರ್ಕತಿ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ನಡೆದ ಎರಡು ದಿನದ ಜನಪದ ರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಜನಪದ ಸಾಹಿತ್ಯ ನಿತ್ಯ ಚಲನಶೀಲವಾಗಿರುವಂತಹ ಸಂಸ್ರ್ಕತಿಯಾಗಿದ್ದು, ಇದನ್ನು ಉಳಿಸುವ ಕೆಲಸವನ್ನು ಶಿಗ್ಗಾಂವಿಯ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾ ಸಂಸ್ಥೆಯವರು ಮಾಡುತ್ತಿದ್ದಾರೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿ ಇಂದು ನಮ್ಮ ಯುವ ಪೀಳಿಗೆ ಸಿನಿಮಾ, ಮೋಬೈಲ್, ಟಿ.ವಿ ಹಿಂದೆ ಹೋಗುತ್ತಿದ್ದಾರೆ, ಅವೆಲ್ಲವು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹಾಗಾಗಿ ಮಕ್ಕಳಿಗೆ ನಮ್ಮ ಜನಪದ ಸಂಸ್ರ್ಕತಿ ಪರಂಪರೆಯನ್ನು ತಿಳಿಸಬೇಕಾಗಿದೆ, ಅಂತಹ ಕಾರ್ಯವನ್ನು ಶಿಗ್ಗಾವಿಯ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ದೆಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆಗೆ ನೂತನವಾಗಿ ಆಯ್ಕೆಯಾದ ನಾಮನಿದರ್ೇಶಿತ ಸದಸ್ಯರಿಗೆ ಸನ್ಮಾನಿಸಲಾಯಿತು, ನಂತರ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾಥರ್ಿಗಳಿಂದ ಯಶೋಧರ ಚರಿತೆ, ಕುಮಾರಿ ಉಮಾ ಭಜಂತ್ರಿ ಅವರಿಂದ ಭರತ ನಾಟ್ಯ, ಶ್ರೀದೇವಿ ಪೂಜಾರ ಅವರಿಂದ ಶಾಸ್ತ್ರೀಯ ಸಂಗೀತ, ನಿಂಗಪ್ಪ ಕುರುಬರ ಹಾಗೂ ಸಂಗಡಿಗರಿಂದ ಸಣ್ಣಾಟದ ಪದಗಳು ಸೇರಿದಂತೆ ಹಲವಾರು ಸಾಂಸ್ರ್ಕತಿಕ ಕಾರ್ಯಕ್ರಮ ಜರುಗಿತು

ಸಂಸ್ಥೆಯ ನಿರ್ದೇಶಕ ರಮೇಶ ಸಾತಣ್ಣವರ. ಸಂಸ್ಥೆಯ ಗೌರಾವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ತಾ.ಪಂ ಮಾಜಿ ಸದಸ್ಯ ಕೆದಾರೆಪ್ಪ ಬಗಾಡೆ, ಸಂಸ್ಥೆಯ ನಿರ್ದೇಶಕ ಸುಮಂಗಲಾ ಹೆಸರೂರ, ವಿಜಯಲಕ್ಷ್ಮೀ ಹೆಸರೂರ, ಅನಿತಾ ಗೊಬ್ಬರಗುಂಪಿ, ಎಸ್.ಬಿ.ಅಯ್ಯಣ್ಣವರ, ಮಲ್ಲಿಕಾರ್ಜುನ ಆರಾಧ್ಯಮಠ, ಶೇಖಪ್ಪ ಜೋಳದ, ಚಂದ್ರಶೇಖರ ಕಮಡೊಳ್ಳಿ, ಚಿನ್ನಪ್ಪ ಕುಂದಗೋಳ, ಮುತ್ತು ಯಲಿಗಾರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ  ಶಿವಾನಂದ ಹೊಸಮನಿ ಸ್ವಾಗತಿಸಿದರು, ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು 

ಸುದ್ದಿ ಓದಿ