ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಿ: ಶಾಸಕ ಯಶವಂತಗೌಡ
ಇಂಡಿ 20: ಕೊರೊನಾ ಸೋಂಕಿತರ ಆರೋಗ್ಯ ಕಾಪಾಡಲು ಸದಾ ಸೇವಾ ಸನ್ನದ್ಧರಾಗಿ ಕೆಲಸ ಮಾಡುವವರು ತಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕೆಂದು ಶಾಸಕ ಯಶವಂತಗೌಡ ಪಾಟೀಲರು ಹೇಳಿದರು.
ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಲಾಖೆಯಿಂದ ಕೊಡಮಾಡಿದ ಆರು ಆಕ್ಸಿಜನ್ ಕಾನ್ಸಂಟ್ರೇಟರ್ನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡಿ ಮಾತನಾಡಿದರು.
ಕೊರೊನಾ ವಾರಿಯರ್ಸ ಆಗಿ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶುಶ್ರುಶಕ ಹಾಗೂ ಡ ವರ್ಗದ ನೌಕರರ ಸೇವೆಯನ್ನು ಪ್ರಶಂಸಿಸಿದರು.
ಕಂದಾಯ ಉಪವಿಬಾಗಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಆಮ್ಲಜನಕ ಕೊರತೆಯಿಂದ ತೀರ್ವ ಸಂಕಷ್ಟದಲ್ಲಿರುವ, ಮೊದಲ ಹಂತದಲ್ಲಿ ಉಸಿರಾಟದ ತೊಂದರೆಗೀಡಾಗುವ ರೋಗಿಗಳಿಗೆ ಈ ಯಂತ್ರ ಅಳವಡಿಸಿದರೆ ಅವರನ್ನು ಸಂಕಷ್ಟದಿಂದ ಪಾರುಮಾಡಿ ಅವರ ಅಮೂಲ್ಯ ಜೀವ ಉಳಿಸಿಕೊಳ್ಳಬಹುದಾಗಿದೆ ಎಂದರು.
ತಹಶೀಲ್ದಾರ ಚಿದಂಬರ ಕುಲಕರ್ಣಿ, ಡಾ.ರಾಜೇಶ ಕೋಳೆಕರ, ಡಾ.ಅನೀಲ ವಾಲಿ, ಪ್ರೀತಿ ಕೋಳೆಕರ, ರಮೇಶ ರಾಠೋಡ, ಜಗದೀಶ ಬಿರಾದಾರ, ಅಮೀತ ಕೋಳೇಕರ, ವಿಪುಲ ಕೋಳೆಕರ, ವಿಜಯಲಕ್ಷ್ಮಿ ಹಾದಿಮನಿ, ಗುರುಬಾಯಿ ಹಿರೆಪಟ್ಟ, ಲಲಿತಾ ಮಠ, ಶ್ರೀದೇವಿ, ಶಿವಾನಂದ ದೇವರ, ಬಸು ಡವಳಗಿ ಮತ್ತಿತರು ಇದ್ದರು.