ಜಮಖಂಡಿ

ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ

ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ

ಲೋಕದರ್ಶನ ವರದಿ 

ಜಮಖಂಡಿ 15: ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಡಾ. ಬಿ,ಆರ್, ಅಂಬೇಡ್ಕರ್ ಅವರ ಪುತ್ಥಳಿಗೆ ತಾಲೂಕಾಡಳಿತ ವತಿಯಿಂದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಮಾಲಾರೆ​‍್ಣ ಮಾಡುವ ಮೂಲಕ 135ನೇ ಜಯಂತಿಯೋತ್ಸವನ್ನು ಆಚರಿಸಲಾಯಿತು. 

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಡಾ, ಬಿ,ಆರ್,ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕರ​‍್ೂರದಿಂದ ಆರತಿ ಬೆಳಗುವ ಜೊತೆಗೆ ಪುಷ್ಪನಮನ ಸಲ್ಲಿಸಿದರು. ಜಿಲ್ಲೆಯ ತುಂಬ ಉಪಚುನಾವಣೆಯ ನಿಮಿತ್ಯವಾಗಿ ನೀತಿಸಂಹಿತೆ ಜಾರಿಯಲ್ಲಿ ಇರುವ ಕಾರಣ ಅತೀ ಸರತೆಯಿಂದ ಡಾ. ಬಿ,ಆರ್,ಅಂಬೇಡ್ಕರ್ ಅವರ 135ನೇ ಜಯಂತಿಯೋತ್ಸವನ್ನು ತಾಲೂಕಡಳಿತ ವತಿಯಿಂದ ಆಚರಣೆಯ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ತಹಶೀಲ್ದಾರ ಅನೀಲ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೇವ ಪಾಸೋಡೆ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ, ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ, ಶುದ್ದ ಕುಡಿಯುವ ನೀರಿನ ನೈರ್ಮಲ್ಯ ಅಧಿಕಾರಿ ಸುರೇಶ ಪಂಚಾಳ, ಸಿಪಿಐ ಮಲ್ಲಪ್ಪ ಮಡ್ಡಿ, ಆರ್‌ಟಿಓ ಕಾರಜೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಪರ ಸಂಘಟನೆಯ ಮುಖಂಡರು ಇದ್ದರು. 


ಸುದ್ದಿ ಓದಿ