ರಾಷ್ಟ್ರೀಯ

ಹೊಸ ರೂಪಾಂತರ ವೈರಸ್ ಹಿನ್ನೆಲೆ: ಜ 7ರವರೆಗೆ ಬ್ರಿಟನ್‍ನಿಂದ ಆಗಮಿಸುವ ವಿಮಾನಗಳ ನಿಷೇಧ

ಹೊಸ ರೂಪಾಂತರ ವೈರಸ್ ಹಿನ್ನೆಲೆ: ಜ 7ರವರೆಗೆ ಬ್ರಿಟನ್‍ನಿಂದ ಆಗಮಿಸುವ ವಿಮಾನಗಳ ನಿಷೇಧ

ನವದೆಹಲಿ, ಡಿಸೆಂಬರ್ 30: ದೇಶದಲ್ಲಿ ಕೋವಿಡ್‍-19 ರೂಪಾಂತರ ವೈರಸ್ ಪ್ರಕರಣಗಳು  ಪತ್ತೆಯಾದ ನಂತರ ಬ್ರಿಟನ್‍ ನಿಂದ ಆಗಮಿಸುವ ವಿಮಾನಗಳ ಮೇಲಿನ ನಿಷೇಧವನ್ನು ಸರ್ಕಾರ ಮುಂದಿನ ತಿಂಗಳ 7 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇಲ್ಲಿ ತಿಳಿಸಿದ್ದಾರೆ.

ಜ 7 ರವರೆಗೆ ಬ್ರಿಟನ್‍ ನಿಂದ ಆಗಮಿಸುವ ಮತ್ತು ಅಲ್ಲಿಗ ಹೊರಡುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ನಂತರ ಕಟ್ಟುನಿಟ್ಟಾಗಿ ನಿಯಂತ್ರಿತ ಕ್ರಮಗೊಂದಿಗೆ ವಿಮಾನಗಳ ಸೇವೆ ಪುನರಾರಂಭಗೊಳ್ಳಲಿದೆ. ಈ ಕುರಿತ ವಿವಿರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು. ಎಂದು ಎಂದು ಹರ್ ದೀಪ್‍ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಆದರೂ, ನಿಷೇಧವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಹೊಸ ಕೋವಿಡ್ -19 ರೂಪಾಂತರ ಪತ್ತೆಯಾದ ನಂತರ ಅಲ್ಲಿಂದ ವಿಮಾನಗಳ ಆಗಮನ ಮೇಲೆ ನಿಷೇಧ ಹೇರಲಾಗಿದೆ. ಡಿ 22 ರ ಮಧ್ಯರಾತ್ರಿಯಿಂದ ಡಿ 31ರ ಮಧ್ಯರಾತ್ರಿ ವರೆಗೆ ಈ ಹಿಂದೆ ನಿಷೇಧ ಹೇರಲಾಗಿತ್ತು.

ಭಾರತದಲ್ಲಿ ಈವರೆಗೆ ಹೊಸ ಕೋವಿಡ್-19 ರೂಪಾಂತರದ 20 ಪ್ರಕರಣಗಳು ವರದಿಯಾಗಿವೆ. 

ಸುದ್ದಿ ಓದಿ