ಮೊದಲು ಮನೆ, ಮಡದಿ ನಂತರ ಮಕ್ಕಳು ಮನುಷ್ಯನ ಮುಖ್ಯ ಗುರಿ
ರಾಣೇಬೆನ್ನೂರು 27: ಮೊದಲು ಮನೆ, ಮಡದಿ ಸಂಸಾರ ನಂತರ ಮಕ್ಕಳು ಗೌರವಯುತವಾದ ಬದುಕಿಗೆ ಸ್ವಂತಿಕೆಯ ಮನೆ ಬೇಕೇ ಬೇಕು ಮನೆ ಇಲ್ಲದೆ ಹೋದರೆ ಸಮಾಜದಲ್ಲಿ ಮರ್ಯಾದೆ ಇಲ್ಲ ಎನ್ನುವುದು ವಾಸ್ತವಿಕ ಸತ್ಯ ಎಂದು ಹಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.
ಅವರು ಗುರುವಾರ ಇಲ್ಲಿನ ಹುಣಸಿಕಟ್ಟಿ ರಸ್ತೆಯ ಕಾಕಿ ಲೇಓಟ್ ನಲ್ಲಿ ನಡೆದ ಫಲಾನುಭವಿಗಳಿಗೆ ನಿವೇಶನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಕಿ ಕುಟುಂಬದ ತಮ್ಮ ಹಿರಿಯರು ತೋರಿಸಿದ ದಾರಿಯಲ್ಲಿ ಸಾಗುತ್ತಿದ್ದೇವೆ. ಅವರು ನಿಷ್ಕಾಮ ಕರ್ಮ ಯೋಗಿಯಾಗಿ ಜನಸಾಮಾನ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ಕಂತಿನ ರೂಪದಲ್ಲಿ ನಿವೇಶನ ವಿತರಿಸುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ತಾವು ಸಹ ಕಂತಿನ ಮೂಲಕ ಹಣ ಪಡೆದು ಅತಿ ಕಡಿಮೆ ದರದಲ್ಲಿ ನಿವೇಶನ ವಿತರಿಸುತಿದ್ದೇವೆ ಇದರಿಂದ ನಮ್ಮ ಮನೆತನಕ್ಕೆ ಸದಾಕಾಲ ಶಾಂತಿ ನೆಮ್ಮದಿ ಮತ್ತು ತೃಪ್ತಿ ಕಾಣುತ್ತಿದ್ದೇವೆ ಎಂದರು. ಐದು ವರ್ಷದ ಯೋಜನೆ ಪೂರ್ಣಗೊಂಡಿದ್ದು, ಕಂತು ತುಂಬಿಸಿಕೊಳ್ಳುವಾಗ ನೀಡಿದ ಭರವಸೆಯಂತೆ ನಿಯಮ ಬದ್ಧವಾಗಿರುವ ಯಾವುದೇ ಅಡೆತ ಡೆ ಇಲ್ಲದೆ ಮನೆ ಕಟ್ಟಿಕೊಳ್ಳುವ ಸಿದ್ಧತೆ ಹೊಂದಿರುವ ನಿವೇಶನಗಳನ್ನು ಇಂದು ವಿತರಿಸಲಾಗುತ್ತಿದೆ. ಎಂದರು ಶಾಸಕ ಆರುಕುಮಾರ್ ಪೂಜಾರ್ ಅವರು, ಸಮಾಜದಲ್ಲಿ ಉತ್ತಮ ಕೆಲಸವನ್ನು ಆರಂಭದಿಂದಲೂ ಮಾಡಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ನೇರವಾಗಿ ಹಣ ನೀಡಿ ನಿವೇಶನ ಪಡೆಯುವುದು ಜನಸಾಮಾನ್ಯರಿಗೆ ತುಂಬಾ ಕಷ್ಟದ ಕೆಲಸ. ಬಡವರಿಗೆ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ಮೂಲಕ ಹತ್ತಾರು ಸಾವಿರ ಸಾಮಾನ್ಯರಿಗೆ ಆಶ್ರಯದಾತರಾಗಿದ್ದಾರೆ, ಜನರ ಶುಭ ಹಾರೈಕೆ, ಸದಾಕಾಲ ಅವರ ಕುಟುಂಬವನ್ನು ರಕ್ಷಣೆ ಮಾಡುತ್ತದೆ ಇದರಿಂದಲೇ ಅವರ ಕುಟುಂಬ ಸದಾಕಾಲ ದಾನ ಧರ್ಮದ ಮೂಲಕ ಜನಪ್ರಿಯತೆ ಗಳಿಸಲು ಸಾಧ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಉಪನ್ಯಾಸಕ ಶಿವಾನಂದ ಬಾಗಾದಿ ಅವರು ವಿವಿದೆಡೆಗಲ್ಲಿ ಲೇ ಓಟ್ಗಳನ್ನು ಮಾಡಿ, ಜನಸಾಮಾನ್ಯರಿಗೆ ತುಲಭ ಕಂತುಗಳಲ್ಲಿ ನಿವೇಶನ ನೀಡಲಾಗುತ್ತದೆ. ಅಲ್ಲದೆ ಹೊಸದಾಗಿ ಅಪಾರ್ಟ್ಮಂಟ್ ಸಹ ನಿರ್ಮಿಸಲಾಗುತ್ತಿದೆ.
ಕಾಕಿ ಕುಟುಂಬದವರು. ಬಡವರ ಆಧಾರಿಗಳು, ಅವರ ಈ ಉದಾರತನದಿಂದಾಗಿ, ನಗರದ ವಿವಿಧ ಭಾಗಗಳಲ್ಲಿ ಪ್ರತಿಯೊಬ್ಬರೂ ನಿವೇಶನ ಪಡೆದು ಮನೆಗಳನ್ನು ನಿರ್ಮಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಜನರು ಇತಿಹಾಸದಿಂದಲೂ ಅವರ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ನಂಬಿಕೆಗೆ ದ್ರೋಹ ಬರದ ರೀತಿಯಲ್ಲಿ ಅವರು ಸಹ ನಡೆದುಕೊಳ್ಳುತ್ತಿದ್ದಾರೆ. ಹಣ ಗಳಿಕೆ ಉದ್ದೇಶ ಅವರದಲ್ಲ. ಸಾಮಾನ್ಯರು ಸಹ ನಿವೇಶನ ಪಡೆದು ಮನೆ ಹೊಂದಬೇಕು ಅದು ಅವರ ಬಹುದೊಡ್ಡ ಆಸೆ ಅಷ್ಟೇ ಎಂದರು. ಇದೆ ಸಂದರ್ಭದಲ್ಲಿ ತಮ್ಮ ವಿವಾಹದ 20ನೇ ವಾರ್ಷಿಕೋತ್ಸವವೂ ಅಪಾರ ಅಭಿಮಾನಿಗಳು ಮತ್ತು ನಿವೇಶನ ಪಡೆದ ನಾಗರಿಕರ ಮಧ್ಯ ಶ್ರೀನಿವಾಸ್ ರೂಪಾ ಕಾಕಿ ಮತ್ತು ವೆಂಕಟೇಶ್ ಲಕ್ಷ್ಮಿ ಕಾಕಿ ಅವರು ಸಂಭ್ರಮದಿಂದ ಆಚರಿಸಿಕೊಂಡರು. ವೇದಿಕೆಯಲ್ಲಿ, ಕುಟುಂಬದ ಹಿರಿಯರಾದ ದೊಡ್ಡ ಹನುಮಂತಪ್ಪ ಕಾಕಿ, ಕೆ.ಸಿ.ನಾಗರಜ್ಜಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಪ್ರಭುಲಿಂಗಪ್ಪ ಹಲಗೇರಿ, ಕೆ.ಎಸ್. ನಾಗರಾಜ್, ಶಿವಶಂಕರ ಲಕ್ಷ್ಮಿ. ಕೆ., ನಗರಸಭಾ ಸದಸ್ಯ ರಾಜಣ್ಣ ಅಡ್ಮಿನಿ, ಮಂಜಪ್ಪ ಕಾಟಿ, ಮಲ್ಲಣ್ಣ ಅಂಗಡಿ, ಶಿವಕುಮಾರ್ ನರಸಗೊಂಡರ, ಸೇರಿದಂತೆ ಕುಟುಂಬದ ಸದಸ್ಯರು, ಲೇಓಟ್ ಸಿಬ್ಬಂದಿ ಮತ್ತಿತರ ಗಣ್ಯರು ಅಭಿಮಾನಿಗಳು ಉಪಸ್ಥಿತರಿದ್ದರು. ಲೇಓಟ್ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿ, ಹೃದಯ ಸ್ಪರ್ಶಿ ಸನ್ಮಾನಿಸಿ ಗೌರವಿಸಲಾಯಿತು