ಧಾರವಾಡ - ಹುಬ್ಬಳ್ಳಿ

ಪ್ರಥಮ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

ಪ್ರಥಮ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

ಧಾರವಾಡ 22: ಕುಮಾರೇಶ್ವರ ನಾಗರಿಕ ಹಿತಾಭಿವೃದ್ಧಿ ಸಂಘ ಇದರ ಪ್ರಥಮ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ-2023-24 ಇಲ್ಲಿಯ ಯಾಲಕ್ಕಿ ಶೆಟ್ಟರ ಕಾಲನಿಯ ಶೃಂಗೇರಿ ಶಂಕರ ಮಠದ ಭವನದಲ್ಲಿ ಜರುಗಿತು.  

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರತಾಪ ಚವ್ಹಾಣ ವಹಿಸಿ ಮಾತನಾಡಿ, ಸಂಘವು ಬಡಾವಣೆಗಳ ನಾಗರಿಕರಿಗೆ ಮೂಲಭೂತ ಸೌಕರ್ಯ ಪಡೆದುಕೊಳ್ಳಲು ಆದ್ಯತೆ ಹೊಂದಿದ್ದು, ಕುಮಾರೇಶ್ವರ ಲೇಓಟ್ ಲಕಮನಹಳ್ಳಿ ಗಳಲ್ಲಿ ದೇವಸ್ಥಾನ ನಿರ್ಮಿಸುವುದು, ಸಾಂಸ್ಕೃತಿಕ ಭವನ ಹೊಂದುವುದು, ಉದ್ಯಾನವನಗಳ ನಿರ್ವಹಣೆ, ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಸಂಘದ ಸದಸ್ಯರ, ಜನಪ್ರತಿನಿಧಿಗಳ, ಮಹಾನಗರ ಪಾಲಿಕೆಯ ಸಹಾಯ ಸಹಕಾರದಿಂದ ಹಮ್ಮಿಕೊಳ್ಳಲಾಗುವುದೆಂದರು.  

ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ ನಂ 23 ರ ಪಾಲಿಕೆ ಸದಸ್ಯ ಮಂಜುನಾಥ ಬಡಕುರಿ ಮಾತನಾಡಿ, ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಕಾರ್ಯ ಮಾಡುವುದಾಗಿ ಹಾಗೂ ತಮ್ಮ ಅನುದಾನದಲ್ಲಿ ಉದ್ಯಾನವನಕ್ಕೆ ಮತ್ತು ಮಿನಿ ಹೈಮಾಸ್ಕ್‌ ಸೇರಿದಂತೆ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಡಕುರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ವೇದಿಕೆಯಲ್ಲಿ ಪದಾಧಿಕಾರಿಗಳಾದ ಸುರೇಶ ಮೇಟಿ, ಅಶೋಕ ಗುಡ್ಡದ, ಡಿ.ಎಂ. ಸಿಂಧಗಿ ಉಪಸ್ಥಿತರಿದ್ದರು. ಗದಿಗೆಪ್ಪ ಜಕ್ಕಣ್ಣವರ ವಾರ್ಷಿಕ ವರದಿ ವಾಚಿಸಿದರು. ಶ್ರೀರಾಮ ಭಟ್ ಪ್ರಾರಂಭದಲ್ಲಿ ಪ್ರಾರ್ಥಿಸಿದರು. ಡಾ. ಸುರೇಶ ಹರ್ಲಾಪೂರ ಸ್ವಾಗತಿಸಿದರು. ಅನೀಕುಮಾರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಡಿನ ಕುಂದುಕೊರತೆ ಕುರಿತು ಶಾಂತವೀರ​‍್ಪ ಕಂಬಾರ, ವೆಂಕಟೇಶ ಮುತಾಲಿಕ, ಶ್ರೀಕಾಂತ ಪೂಜಾರ, ಗೋಪಾಲ ಕರಣಿ, ಮಹಾಂತೇಶ ಘಂಟಿ ವಿಸ್ತೃತವಾಗಿ ಮಾಹಿತಿ ನೀಡಿದರು. ಗಂಗಾಧರ ಎನ್‌. ತಪಶೆಟ್ಟಿ ಈ ಸಂದರ್ಭದಲ್ಲಿ ಅನಿಸಿಕೆ ಹಂಚಿಕೊಂಡರು. ವ್ಹಿ.ಬಿ. ಅಜಗೊಂಡ ವಂದಿಸಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. 

ಸಭೆಯಲ್ಲಿ ಶ್ರೀಶೈಲ ಲಗಳಿ, ಬಿ. ನೀಲಕಂಠ, ಮಾರುತಿ ಪೂಜಾರ, ಬಿ.ಎಂ. ಬೀಳಗಿ, ವಿನೋದ ಮಿಠಾರೆ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ