ಪಿಆರ್ಓ, ಎಪಿಆರ್ಓಗಳ ಮೊದಲ ಹಂತದ ತರಬೇತಿ ಕಾರ್ಯಗಾರ
ರಾಣಿಬೆನ್ನೂರ 12: ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದಲ್ಲಿ ಚುನಾವಣೆಗೆ ನಿಯುಕ್ತಿಗೊಂಡ ಮತಗಟ್ಟೆಗಳ ಪಿಆರ್ಓ, ಎಪಿಆರ್ಓಗಳ ಮೊದಲ ಹಂತದ ತರಬೇತಿ ಕಾರ್ಯಗಾರ ನಡೆಯಿತು.
ಬೆಳಿಗ್ಗೆ ಚುನಾವಣೆ ಕರ್ತವ್ಯಕ್ಕೆ ನಿಯುಕ್ತಿಗೊಂಡ ಪಿಆರ್ಓ ಎಪಿಆರ್ಓ ಸಿಬ್ಬಂದಿ ಆಗಮಿಸಿದ ಹಾಜರಾತಿಗೆ ಸಹಿ ಮಾಡಿದ ನಂತರ ತಮಗೆ ನಿಗಧಿ ಪಡಿಸಿದ ಕೋಣೆಗಳಿಗೆ ತೆರಳಿ ಮಾಸ್ಟರ್ ಟ್ರೇನರ್ಗಳಿಂದ ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳು, ಚುನಾವಣಾ ಆಯೋಗ ನೀಡಿದ ಮಾಹಿತಿಗಳ ಕುರಿತು ತರಬೇತಿ ಪಡೆದುಕೊಂಡರು. 23 ಸೆಕ್ಟರ್ ಅಧಿಕಾರಿಗಳು, 317 ಪಿಆರ್ಓ ಮತ್ತು 358 ಎಪಿಆರ್ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. 7 ಮಾಸ್ಟರ್ ತರಬೇತುದಾರರು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿ ತರಬೇತಿ ನೀಡಿದರು.
ಸಹಾಯಕ ಚುನಾವಣಾಧಿಕಾರಿ ರೇಸ್ಮಾ ಕೌಸರ್ ಅವರು ತರಬೇತಿಯನ್ನು ವೀಕ್ಷಿಸಿ ಮಾತನಾಡಿ, ನಾವೆಲ್ಲರೂ ಅಂದುಕೊಂಡ ರೀತಿಯಲ್ಲೇ ಚುನಾವಣೆ ಪ್ರಕ್ರಿಯೆ, ಮತದಾನ ನಡೆಯಬೇಕಾದರೆ ಪಿಆರ್ಒ, ಎಪಿಆರ್ಒಗಳ ಪಾತ್ರ ಬಹು ಮುಖ್ಯವಾಗಿದ್ದು, ಸೂಕ್ತ ರೀತಿಯಲ್ಲಿ ತರಬೇತಿ ಪಡೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು.
ನೀವು ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಭಾಗವಹಿಸಿರಬಹುದು, ಎಲ್ಲ ವಿಚಾರಗಳು ತಿಳಿದಿರಬಹುದು. ಆದರೆ ಪ್ರತಿ ಚುನಾವಣೆ ಹೊಸದು ಎನ್ನುವುದನ್ನು ಮರೆಯುವಂತಿಲ್ಲ. ಪ್ರತಿಯೊಬ್ಬರೂ ತರಬೇತುದಾರರಿಂದ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ತಮ್ಮ ಸಮಸ್ಯೆ, ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.
ತರಬೇತಿದಾರರು ಸಮರ್ಕವಾಗಿ ತರಬೇತಿ ಪಡೆದುಕೊಂಡು ಮತಯಂತ್ರ ವಿವಿಪ್ಯಾಡ್ ನಿರ್ವಹಣೆ ಕುರಿತು ಮತ್ತು ಪತ ಪತ್ರಗಳ ಪರಿಪೂರ್ಣವಾಗಿ ಅರಿತುಕೊಂಡರೆ ಮತದಾನ ವೇಳೆ ಸಲೀಸಾಗಲಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ತರಬೇತಿ ಹೊಂದಿ ಚುನಾವಣೆ ಕಾರ್ಯ ಯಶಸ್ವಿಯಾಗಲು ಎಲ್ಲರೂ ಕೈ ಜೋಡಿಸಬೇಕು ಸಲಹೆ ನೀಡಿದರು.
ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದಂತೆ ಚುನಾವಣೆ ಕೂಡ ಒಂದು ಹಬ್ಬ ಎಲ್ಲರೂ ಒಂದಾಗಿ ಹಬ್ಬದ ಆಚರಣೆಯಂತೆ ಚುನಾವಣೆ ಯಶಸ್ವಿಗೊಳಿಸೋಣ ಎಂದು ಎಲ್ಲರಿಗೂ ಶುಭ ಕೋರಿದರು.
ತಹಶೀಲ್ದಾರ ಟಿ. ಸುರೇಶಕುಮಾರ, ಬಿಇಓ ಎಂ.ಎಚ್. ಪಾಟೀಲ, ಪೌರಾಯಕ್ತ ಎನ್.ಎಚ್. ಕುಮ್ಣನವರ, ಉಪತಹಶೀಲ್ದಾರ ಮೋಹನಕುಮಾರ ಕಡೂರ, ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಎಚ್.ಎಚ್. ಜಾಡರ, ರವೀಶಆರಾಧ್ಯ, ಮಂಜು ನಾಯಕ, ಎಚ್.ಎಚ್. ಪೂಜಾರ, ಎಸ್.ಎಚ್. ಬಣಕಾರ, ಚಂದ್ರು ದೇವಾಂಗದ, ಮಂಜುನಾಥ ಕೆಂಚರಡ್ಡಿ, ರುದ್ರೇಶ, ಅಶೋಕ ಅರಳೇಶ್ವರ ಇದ್ದರು.