ರಾಣೆಬೆನ್ನೂರ

ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಆರೋಪ

ಸ್ಪಾರ್ಕ್  ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಆರೋಪ

ಲೋಕದರ್ಶನ ವರದಿ

ರಾಣೇಬೆನ್ನೂರು 06:  ಇಲ್ಲಿನ ಮಾರುತಿ ನಗರದಲ್ಲಿರುವ ವಿಘ್ನೇಶ್ವರ ಸ್ಪಾರ್ಕ್  ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ನಡೆದ ಬೆಂಕಿ ಅವಘಡದಲ್ಲಿ 7 ಜನ ಕಾರ್ಮಿಕರು ಗಂಭೀರ ಗಾಯಗೊಂಡು ಓರ್ವ ಬುಧವಾರ ಮೃತಪಟ್ಟಿದ್ದಾನೆ. ಈ ದುರಂತಕ್ಕೆ ನೇರ ಹೊಣೆಗಾರರು ನಗರಸಭೆ ಪರಿಸರ ಅಭಿಯಂತರು. ವಾಣಿಜ್ಯ ಕಟ್ಟಡಕ್ಕೆ ವಸತಿ ಕಟ್ಟಡ ಎಂದು ಪರವಾನಿಗೆ ನೀಡಿದ್ದರಿಂದಲೇ ಈ ದುರಂತ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಕಬ್ಬಾರ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂತಹ ದುರಂತಕ್ಕೆ ಕಾರಣರಾದ ಅಧಿಕಾರಿಯನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕು ಎಂದ ಅವರು, ಮೃತ ಕಾರ್ಮಿಕ ಶಂಭುಲಿಗನಗೌಡ ದ್ಯಾಮನಗೌಡ್ರ ಇವರ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು. ಇನ್ನುಳಿದ 6 ಜನ ಕಾರ್ಮಿಕರೂ ಸಹ ಇನ್ನೂ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಅವರಿಗೂ ಕೂಡ ಸರ್ಕಾರದಿಂದ ಪರಿಹಾರ ನೀಡಬೇಕು ಎಂದರು.

ನಗರದ ನೈರ್ಮಲ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಎಲ್ಲೆಂದರಲ್ಲಿ ಕಸಕಡ್ಡಿ, ಅವೈಜ್ಞಾನಿಕ ಗಟಾರ ನಿರ್ಮಾಣ, ರಸ್ತೆ ಬದಿಯ ಎಗ್ ರೈಸ್ ಅಂಗಡಿಗಳಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಆರೋಗ್ಯಾಧಿಕಾರಿ ರೈಸ್ನ್ನು ಪರಿಶೀಲಿಸಬೇಕು. ಆದರೆ, ದುರಾದೃಷ್ಟವಶಾತ್ ಆರೋಗ್ಯಾಧಿಕಾರಿ ಈವರೆಗೂ ಯಾವ ಅಂಗಡಿಗೂ ಸಹ ಹೋಗದೆ ಕಾಲಹರಣ ಮಾಡುತ್ತಿದ್ದಾರೆ ಎಂದ ಹನುಮಂತಪ್ಪ, ಇಲ್ಲಿನ ದುರಾಡಳಿತ ವಿರೋಧಿಸಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದರು 

ಸುದ್ದಿ ಓದಿ