ಅಗ್ನಿ ಅವಘಡ: ಆರು ಸೈಕಲ್ ಮೋಟಾರ್ ಸಂಪೂರ್ಣ ಭಸ್ಮ
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು ಕರಕಲಾಗಿವೆ. ಜಯಣ್ಣಗೌಡ ಪಾಟೀಲ ಇವರಿಗೆ ಸೇರಿದ ಗುಡಿಸಲು ಇದಾಗಿದ್ದು, ತಡವಲಗಾ ಗ್ರಾಮದ ಗೌಡರ ಮನೆತನದ ಸುಭದ್ರಾಗೌಡ್ತಿ ದೇವಪ್ಪಗೌಡ ಪಾಟೀಲ ಎಂಬುವವರು ನಿನ್ನೆ ಬೆಳಗ್ಗೆ ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬಂಧುಗಳು ಬಂದಿದ್ದರು. ಅಂತ್ಯಸಂಸ್ಕಾರ ಸಮಯದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಪಟಾಕಿ ಕಿಡಿಯಿಂದ ಹೊತ್ತಿದ ಬೆಂಕಿಯಿಂದಾಗಿ ಸುಮಾರು ಆರು ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನಗಳು, ಹಾಗೂ ಗುಡಿಸಲಿನಲ್ಲಿ ಇದ್ದ ಹತ್ತು ಚೀಲ ತೋಗರಿ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಇಂಡಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಬಿ.ಕೆ. ಚನ್ನಾ, ಹಣಮಂತ ಮಡಿವಾಳರ, ಎಮ್.ಎನ್. ಬಂಥನಾಳ, ತುಕಾರಾಮ ರಾಠೋಡ ಅವರ ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿ ಸುಮಾರು ಒಂದು ಗಂಟೆಯ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನಾ ಸ್ಥಳಕ್ಕೆ ತಡವಲಗಾ ಗ್ರಾಮ ಲೇಕ್ಕಾಧಿಕಾರಿ ಅಧಿಕಾರಿ ಮಹೇಶ್ ರಾಠೋಡ ಭೇಟಿ ನೀಡಿದ್ದು, ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಭೇಟಿ ನೀಡಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು ಆರು ಸೈಕಲ್ ಮೋಟಾರ್ ಹಾಗೂ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದ್ದು.