ಹೆಳವನಕಟ್ಟಿ ಗಿರಿಯಮ್ಮ ಸ್ತ್ರೀವಾದಿ ಚಿಂತನೆಗಳು, ಹೆಳವನಕಟ್ಟೆ ಗಿರಿಯಮ್ಮ ಗ್ರಂಥಗಳ ಲೋಕಾರ್ಪಣೆ
ರಾಣೇಬೆನ್ನೂರು,03 : ಸೆ 3ಸಮಾಜದಲ್ಲಿ ಸ್ತ್ರೀ ವಾದದ ಚಿಂತನೆಗಳ ಬಗ್ಗೆ ಹೆಚ್ಚು ಪ್ರತಿಭಾಂದನೆಯನ್ನು ಮಾಡಿದವರು ಹೆಳವನಕಟ್ಟೆ ಗಿರಿಯಮ್ಮನವರು. ಒಬ್ಬ ಸಾಮಾನ್ಯ ಮಹಿಳೆ ಸಂಸಾರವನ್ನು ಗೆದ್ದು ಭಕ್ತಿ ಪಥದಲ್ಲಿ ಸಾಗಿ ಹೆಳವನಿಗಾಗಿ ಕಟ್ಟಿದ ಕಟ್ಟೆಯಲ್ಲಿ ರಂಗನಾಥ್ ಅವರನ್ನು ಕಂಡವರು ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಕುಲಪತಿಗಳಾದ ಡಾ. ಎ ಮುರಿಗೆಪ್ಪನವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಆಯೋಜಿಸಿದ್ದ ಡಾ. ಕೆ. ಎಚ್. ಮುಕ್ಕಣ್ಣನವರ ಅವರ ಬರೆದಿರುವ ಹೆಳವನಕಟ್ಟಿ ಗಿರಿಯಮ್ಮ ಸ್ತ್ರೀವಾದಿ ಚಿಂತನೆಗಳು ಹಾಗೂ ಕಡೆಗಣ್ಣಲಿ ನೋಡದಿರೆನ್ನಯ್ಯ ಹೆಳವನಕಟ್ಟೆ ಗಿರಿಯಮ್ಮ ಗ್ರಂಥಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಹೆಳವನಕಟ್ಟೆ ಗಿರಿಯಮ್ಮ ಅವರ ಬಗ್ಗೆ ಸಂಶೋಧನೆಗಳಾಗಬೇಕು, ಇವರು ಮೂಲತಃ ರಾಣೇಬೆನ್ನೂರು ನಗರದವರಾಗಿದ್ದರಿಂದ ಎಲ್ಲರೂ ಅಭಿಮಾನ ಪಡುವಂತಾಗಿದೆ.
ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳಿದ್ದು ಮುಂದೆ ಬಂದು ಸಾಹಿತ್ಯದಲ್ಲಿ ತೊಡಗಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಳವನಕಟ್ಟೆ ಗಿರಿಯಮ್ಮ ಅವರ ಬಗ್ಗೆ ಪುಸ್ತಕ ಬರೆದಿರುವುದು ಉತ್ತಮವಾಗಿದೆ. ಸಮಾಜದಲ್ಲಿ ಸಾಧನೆ ಮಾಡಿದ ಸ್ತ್ರೀಯರ ಬಗ್ಗೆ ಪುಸ್ತಕಗಳು ಬರೆದಿರುವುದು ಕಡಿಮೆ. ಅಂತದರಲ್ಲಿ ಡಾ ಕೆ ಎಚ್ ಮುಕ್ಕಣ್ಣನವರ ಹೆಳವನಕಟ್ಟೆ ಗಿರಿಯಮ್ಮ ಬಗ್ಗೆ ಬರೆಯುತ್ತಿರುವುದು ಸ್ತ್ರೀ ಚಿಂತನೆ, ಸಂಶೋಧನೆಗೆ ಎಲ್ಲರೂ ಒತ್ತು ನೀಡಬೇಕು. ಐತಿಹಾ ಮತ್ತು ಐತಿಹಾಸಿಕ ಎರಡು ಪದಗಳ ವ್ಯತ್ಯಾಸ ಬೇರೆ ಬೇರೆ ಇದೆ. ಒಬ್ಬ ಸ್ತ್ರೀ ಬಗ್ಗೆ ಸಂಶೋಧನೆ ಮಾಡಿ ಇತಿಹಾಸಿಕ ಗ್ರಂಥಗಳನ್ನು ಓದಿ ಅವರ ಬಗ್ಗೆ ಸಂಪೂರ್ಣವಾಗಿ ಬೆಳಕು ಚೆಲ್ಲಿ ಇಂತಹ ಪುಸ್ತಕವನ್ನು ಬರೆದಿರುವುದು ಶ್ಲಾಘನೀಯ ಎಂದರು.ಹೆಳವನಕಟ್ಟಿ ಗಿರಿಯಮ್ಮ ಸ್ತ್ರೀವಾದಿ ಚಿಂತನೆಗಳು ಗ್ರಂಥವನ್ನು ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಪ್ರಾಧ್ಯಾಪಕರಾದ ಡಾ. ಶಿವಾನಂದ ಕೆಳಗಿನಮನಿ ಹಾಗೂ ಕಡೆಗಣ್ಣಲಿ ನೋಡದಿರೆನ್ನಯ್ಯ ಹೆಳವನಕಟ್ಟಿ ಗಿರಿಯಮ್ಮ ಗ್ರಂಥವನ್ನು ಸರಕಾರಿ ಪದವಿ ಕಾಲೇಜು ಚಿಕ್ಕಬಾಸೂರು ಪ್ರಾಧ್ಯಾಪಕರಾದ ಡಾ. ಪುಷ್ಪವತಿ ಶಲವಡಿಮಠ ಪರಿಚಯಿಸಿದರು.ಡಾ. ಕೆ. ಎಚ್. ಮುಕ್ಕಣ್ಣನವರ, ಡಾ. ಲಿಂಗರಾಜ ಕಮ್ಮಾರ, ಏಕನಾಥ ಭಾನುವಳ್ಳಿ, ಜಿ. ಜಿ.ಹೊಟ್ಟಿಗೌಡ್ರ ತಾಲೂಕ ಕ. ಸಾ.ಪರಿಷತ್ತು ಅಧ್ಯಕ್ಷ ಪ್ರಭಾಕರ ಶಿಗ್ಲಿ ಮೊದಲಾದವರು ಮಾತನಾಡಿದರು. ಸುನಿಲ ದೇವರಗುಡ್ಡ ಪ್ರಾರ್ಥಿಸಿದರು, ಖಜಾಂಚಿ ಎಚ್.ಎಸ್. ಮುದಿಗೌಡ್ರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ವೀರೇಶ್ ಜಂಬಗಿ ಪರಿಚಯಿಸಿದರು. ,ಗೌರವ ಕಾರ್ಯದರ್ಶಿ ಜಗದೀಶ್ ಮಳಿಮಠ ನೀರೂಪಿಸಿ, ಪ್ರಭಾಕರ ಎನ್. ಶಿಗ್ಲಿ ವಂದಿಸಿದರು ಕಾರ್ಯಕ್ರಮದಲ್ಲಿ ಬಿ. ಪಿ. ಶಿಡೇನೂರ, ನಾಗರಾಜ್ ಕುಲಕರ್ಣಿ, ಶ್ರೀಮತಿ ವೀಣಾ ಶ್ರೀಧರ, ಸಂಜೀವ ಶಿರಹಟ್ಟಿ, ಶ್ರೀನಿವಾಸ ಎಕಬೋಟೆ, ನಾಮದೇವ ಕಾಗದಗಾರ, ಸೀತಾರಾಮ ಕಣೆಕಲ್, ಡಾ. ಎಸ್ ಜಿ ವೈದ್ಯ, ಪುಟ್ಟು ಕುಲಕರ್ಣಿ, ಶ್ರೀಮತಿ ಎ ಬಿ ರತ್ನಮ್ಮ, ಶ್ರೀಮತಿ ನಿರ್ಮಲಾ ಲಮಾಣಿ, ಶ್ರೀಮತಿ ವಿದ್ಯಾವತಿ ಮಳಿಮಠ, ಶ್ರೀಮತಿ ಮಂಜುಳಾ ಹಿರೆಬಿದರಿ, ಶ್ರೀಮತಿ ಗಾಯಿತ್ರಮ್ಮ ಕುರುವತ್ತಿ, ಸುಭಾಸ ಕುರುಬರ, ವಾಯ್ ಯು ತಳವಾರ, ಎಚ್ ಎಚ್ ಜಾಡರ, ಚಂದ್ರಶೇಖರ ಮಡಿವಾಳರ, ನಾಗರಾಜ ಮಾಕನೂರ, ಕನ್ನಡ ಪರ ಸಂಘಟನೆಯ ಸದಸ್ಯರಾದ ಮಲ್ಲಿಕಾರ್ಜುನ ಸಾವಕ್ಕಳವರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಸಂಜೀವರೆಡ್ಡಿ ಮದಗುಣಕಿ,ಬಸವರಾಜ ಸಾವಕ್ಕನವರ, ಶ್ರೀಧರ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.