ಸೇವಾ ನಿವೃತ್ತ ಹೊಂದಿರುವ ಗುರುವಿಗೆ ಸನ್ಮಾನ
ಇಂಡಿ 10: ನಗರದ ಮಹಾಲಕ್ಷ್ಮಿ ನಗರದ ಕಮೀಟಿ ಹಾಗೂ ನಗರದ ಎಲ್ಲಾ ನಿವಾಸಿಗಳಿಂದ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಆಪ್ತ ಸಹಾಯಕರಾದ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳ ತಮ್ಮಣ್ಣ ಎಸ್ ಖಟ್ಟೆ ಅವರನ್ನು ಶುಕ್ರವಾರ ನಾಗರ ಪಂಚಮಿ ಹಬ್ಬದ ದಿನದಂದು ಸೇವಾ ನಿವೃತ್ತ ಹೊಂದಿರುವ ತಮ್ಮಣ್ಣ ಎಸ್ ಖಟ್ಟೆ ಹಾಗೂ ಅವರ ಧರ್ಮಪತ್ನಿಯನ್ನು ಮಾಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇವರು ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಇಂಡಿ ತಾಲ್ಲೂಕಿನ ತಡವಲಗಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶಾಲೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.ನಂತರ 2013 ರಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಯಶವಂತರಾಯಗೌಡ ಪಾಟೀಲ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ವಯೋಸಹಜದಿಂದ ನಿವೃತ್ತ ಹೊಂದಿದ್ದಾರೆ.ಈ ಸಂದರ್ಭದಲ್ಲಿ ಆನಂದ ಗಣಾಚಾರಿ, ಬಸವರಾಜ ಮೇತ್ರಿ, ಪ್ರಶಾಂತ್ ಗುಂದಗಿ, ವಿನೋದ್ ಉರ್ಮಜಿ, ಸೋಮು ರಾಜು ತಾಂಬೆ, ಸತೀಶ್ ಕುಲಕರ್ಣಿ, ಭಾರತೀ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.