ನಿವೃತ್ತ ಯೋಧ ಸೋಮಶೇಖರಗೆ ಸನ್ಮಾನ
ಇಂಡಿ 06: ಇಂಡಿ ತಾಲ್ಲೂಕಿನ ಬೊಳೆಗಾಂವ ಗ್ರಾಮದ ನಿವೃತ್ತ ಯೋಧ ಸೋಮಶೇಖರ ಕೋಟೆನವರ ಅವರನ್ನು ಗ್ರಾಮಕ್ಕೆ ಆಗಮಿಸುತ್ತಿದಂತೆ ಅವನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.ನಂತರ ಅವರನ್ನು ಗ್ರಾಮದ ಜೈ ಹನುಮಾನ್ ಮಂದಿರದಲ್ಲಿ ಸನ್ಮಾನಸಿ ಗೌರವೈಸಲಾಯಿತು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಕ ರಮೇಶ ಮುಂಜಣಿ ಮಾತನಾಡಿ ಸೈನಿಕರು ತಮ್ಮ ಜೀವನವನ್ನೇ ಪಣವಾಗಿ ಇಟ್ಟುಕೊಂಡು ಕಣ್ಣಲ್ಲಿ ಕಣ್ಣಿಟ್ಟು ಗಡಿಯನ್ನು ಕಾಯುತ್ತಿರುವುದರಿಂದಲೇ ನಾವು ಇಂದು ನಮ್ಮ ದೇಶದಲ್ಲಿ ನೆಮ್ಮದಿಯಿಂದ, ಶಾಂತಿಯಿಂದ, ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಹೇಳಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ನಿವೃತ್ತ ಯೋಧ ಸೋಮಶೇಖರ್ ಕೋಟೆನವರ ನಾನು ಭಾರತಮಾತೆಯ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದು ದೇಶಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.ರೈತ ಬೀರಣ್ಣ ಹಳ್ಳಿ ಮಾತನಾಡಿ ಸೈನಿಕರು ಕೇವಲ ಗಡಿ ಕಾಯುವ ಕೆಲಸದ ಜೊತೆಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ ಎಂದು ಹೇಳಿದರು.
ಶಿಕ್ಷಕ ಬಸವರಾಜ ಬಿರಾದಾರ ಮಾತನಾಡಿ ರೈತ ದೇಶಕ್ಕೆ ಅನ್ನ ನೀಡಿದರೆ ಸೈನಿಕ ನಮ್ಮ ದೇಶದ ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಇಬ್ಬರೂ ನಮ್ಮ ದೇಶದ ಬೆನ್ನೆಲುಬು ಇದ್ದಂತೆ ಎಂದುಹೇಳಿದರು. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೃತ್ಯುಂಜಯ ಹಿರೇಮಠ ನೆರವೇರಿಸಿದರು. ಕಾರ್ಯಕ್ರಮವನ್ನು ಕಾಶಿನಾ ಸ್ವಾಗತಿಸಿದರು.ಪ್ರಾಸ್ತಾವಿಕ ಶಿಕ್ಷಕ ಪ್ರಶಾಂತ ತಳವಾರ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಕಪ್ಪ ಗುಂಜುಟಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಶಂಕರ ಕಪ್ಪೆನವರ, ಸಂಜು ಜಾಲಗೇರಿ ಸೇರಿದಂತೆ ಗ್ರಾಮದಲ್ಲಿಯ ದೇಶದ ಅಭಿನಂದನೆಗಳು,ಗಣ್ಯರು ಪಾಲ್ಗೊಂಡಿದ್ದರು.