ರಾಣೆಬೆನ್ನೂರ

ಮಾಧ್ಯಮ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮಾಧ್ಯಮ ಕ್ಷೇತ್ರದ ಸಾಧಕರಿಗೆ ಸನ್ಮಾನ

ರಾಣೆಬೇನ್ನುರ 19: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಮೊಹರೆ ಹನುಮಂತರಾಯ" ಪ್ರಶಸ್ತಿ ಸ್ವೀಕರಿಸಿದ ನವೋದಯದ ಸಂಪಾದಕರಾದ ರಾಜೀವ್‌. ಕಿದಿಯೂರ್ ಅವರಿಗೆ ಗೌರವಾನ್ವಿತ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಹಿತೈಷಿ ಬಳಗ ಹಾಗೂ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ್, ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್‌.ಎಂ. ಅಗಡಿ, ಮುಖ್ಯೋಪಾಧ್ಯಾಯರಾದ ಎಂ .ಎಚ್‌. ಪೂಜಾರ್, ಎಸ್ ಜಿ ಕೊಲ್ಮಿ ಹಾಗೂ   ನವೋದಯ ಬಳಗ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ