ಧಾರವಾಡ - ಹುಬ್ಬಳ್ಳಿ

ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ

ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ

ಹುಬ್ಬಳ್ಳಿ,08:  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಂಜುನಾಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಹಲವಾರು ವರ್ಷಗಳು ಶಿಕ್ಷಕರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕಿ ಅನ್ನಪೂರ್ಣ ವೀರಭದ್ರಯ್ಯ ಚೌಕಿಮಠ, ವೀಣಾ ಕೆ. ಉಪಾಧ್ಯಾಯ, ಶಿಕ್ಷಕ ಟಿ.ಎಚ್‌.ದಾಸರ, ಹಾಗೂ ಶಾಲೆಯ ಮುಖ್ಯ ಶಿಕ್ಷಕ ಡಾ. ಎಚ್‌.ಬಿ.ಕೊರವರ ಅವರಿಗೆ ಸನ್ಮಾನಿಸಲಾಯಿತು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್‌.ಎಂ.ಸಾತ್ಮಾರ, ಉಪಾಧ್ಯಕ್ಷ  ಚನ್ನಬಸಪ್ಪ ಧಾರವಾಡಶೆಟ್ಟರ, ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ, ಎಸ್‌.ವಾಯ್‌. ಹರನಾಳ, ವೇದಾ ನಾಗನೂರ,  ಮಂಜುಳಾ ಸಾತಪುತೆ,  ಸೈನಾಬಿ ನದಾಫ್,  ಕುಸುಮಾ ಚಕ್ರಸಾಲಿ, ರೂಪಾ ಹೆಬ್ಬಳ್ಳಿ, ವಿಜಯಲಕ್ಷ್ಮೀ ಮುರಗೋಡ, ಮಕ್ಕಳು, ಮುಂತಾದವರು ಇದ್ದರು. ಡಾ. ಸುರೇಶ ಡಿ. ಹೊರಕೇರಿ, ಪ್ರೊ ಎಸ್‌.ಎಂ.ಸಾತ್ಮಾರ ಅವರು ಮಾತನಾಡಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ಮಹತ್ವದ ಕೆಲಸವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಮಮತೆ, ಪ್ರೀತಿಯಿಂದ ಪಾಠ ಮಾಡುವುದು ಸುಲಭದ ಮಾತೇನಲ್ಲ. ಶಿಕ್ಷಕ ವೃತ್ತಿಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಗೌರವಿಸುತ್ತಿರುವುದು ತುಂಬಾ ಸಂತೋಷ, ಹೆಮ್ಮೆ ಹಾಗೂ ಅಭಿಮಾನವೇನಿಸುತ್ತದೆ. ನಿವೃತ್ ಶಿಕ್ಷಕರ ಮುಂದಿನ ಜೀವನ ಉತ್ತಮ ಆರೋಗ್ಯದೊಂದಿಗೆ ಸುಖ, ಸಂತೋಷವಾಗಿರಲಿ ಎಂದು ಶುಭ ಕೋರಿದರು. 


ಸುದ್ದಿ ಓದಿ