ರಾಣೆಬೆನ್ನೂರ

ಹನುಮಂತಪ್ಪ ಮುಕ್ತೇನಹಳ್ಳಿಗೆ ಧರ್ಮ ಸೇವಾಕರ್ತ ಅಭಿಧಾನ: ಸನ್ಮಾನ

ಹನುಮಂತಪ್ಪ ಮುಕ್ತೇನಹಳ್ಳಿಗೆ ಧರ್ಮ ಸೇವಾಕರ್ತ ಅಭಿಧಾನ: ಸನ್ಮಾನ

ರಾಣೇಬೆನ್ನೂರು 09:  ಧಾರ್ಮಿಕ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರದಲ್ಲಿ ಇತ್ತೀಚೆಗೆ ಹೈದರಾಬಾದ್ ತೆಲಂಗಾಣದ ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘವು ತನ್ನ ರಜತ ಮಹೋತ್ಸವ, 25ನೇ ವಾರ್ಷಿಕ ಮಹಾಸಬೆ ಆಯೋಜಿಸಿತ್ತು. ಎರಡು ದಿವಸಗಳ ಕಾಲ ಅದ್ದೂರಿಯಾಗಿ ಜರುಗಿದ ಧಾರ್ಮಿಕ ಜಾಗೃತಿ ಸಮಾವೇಶದಲ್ಲಿ, ರಾಣೇಬೆನ್ನೂರು ನಗರದ,ಪದ್ಮಶಾಲಿ ಸಮಾಜದ ಹಿರಿಯ ಮುಖಂಡ ಹನುಮಂತಪ್ಪ ಟಿ. ಮುಕ್ತೇನಹಳ್ಳಿ ಅವರನ್ನು "ಧರ್ಮ ಸೇವಾಕರ್ತ " ಅಭಿಧಾನವನ್ನಿತ್ತು ಶ್ರೀಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ, ಕರ್ನಾಟಕದ ಶ್ರೀ ಮಾರ್ಚಲು ಕೇಶವಮೂರ್ತಿ,  ಗುರು ಮಾರ್ಖಂಡೇಶ್ವರ ಪದ್ಮಶಾಲಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು, ಕಾರ್ಯದರ್ಶಿ ರವೀಂದ್ರ ಸಗ್ಗಂ, ಬಿ.ಟಿ. ಚುಂಚಾ,ಚಂದ್ರಶೇಖರ ಮಂಚಿ, ನೀಲಪ್ಪ ಕುಮಾರ​‍್ಪನವರ, ಸೇರಿದಂತೆ  ನಾಡಿನ ಮತ್ತಿತರ ಗಣ್ಯರು, ಧರ್ಮ ಗುರುಗಳು ಮಠಾಧೀಶರು, ಪೀಠಾಧಿಪತಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ