ಧಾರವಾಡ - ಹುಬ್ಬಳ್ಳಿ

ಜಿ.ಬಿ. ಹೊಂಬಳ ಅವರಿಗೆ ಸನ್ಮಾನ

ಜಿ.ಬಿ. ಹೊಂಬಳ ಅವರಿಗೆ ಸನ್ಮಾನ

ಹುಬ್ಬಳ್ಳಿ 12: ಮಕ್ಕಳ ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಮಕ್ಕಳ ಸಾಹಿತಿಗಳಿಗೆ ಸದಾ ಪ್ರೊತ್ಸಾಹ ನೀಡುತ್ತಿರುವ, ಪ್ರತಿ ವರ್ಷ ಮಕ್ಕಳ ಸಾಹಿತಿಗಳನ್ನು ಗುರುತಿಸಿ ಶ್ರೀ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವ, ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರತಿ ವರ್ಷ ಉತ್ತಮ ಗ್ರಂಥಪಾಲಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೊತ್ಸಾಹಿಸುತ್ತಿರುವ, ನಿವೃತ್ ಗ್ರಂಥಪಾಲಕ ಜಿ.ಬಿ.ಹೊಂಬಳ ಅವರ 80ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿ, ಜಿ.ಬಿ.ಹೊಂಬಳ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ನಿವೃತ್ ಗ್ರಂಥಪಾಲಕ ಸಿದ್ದಯ್ಯ ಹಿರೇಮಠ, ಎಚ್‌.ಎಸ್‌.ಗಡ್ಡಿ, ಎಸ್‌.ಐ.ನೇಕಾರ, ವೆಂಕಣ್ಣ ಮರಿಯಪ್ಪಗೌಡರ, ಶ್ರೀನಿವಾಸ ವಾಡಪ್ಪಿ, ಬಿ.ಎಸ್‌.ಶಿರೋಳ, ಮಾರುತಿ ಎಂ. ತಲಗೇರಿ, ಸತ್ಯಾ ಸವಣೂರ, ಪ್ರಕಾಶ ಕಡಮೆ, ಎಸ್‌.ಜಿ.ತಿಗಡಿ,  ನಿರ್ಮಲಾ ಶೆಟ್ಟರ,  ಶಿ.ಮ. ರಾಚಯ್ಯನವರ, ನಿಂಗಪ್ಪ ಶಿ. ಕಾಶಪ್ಪನವರ, ಇಂದುಧರ ಹಿರೇಮಠ, ವಿ.ಎಚ್‌.ಕರೆಡ್ಡಿ, ವಿ.ಬಿ.ಸೂರಣಗಿ, ವಿ.ಎನ್‌.ಕಮ್ಮಾರ, ಎಸ್‌.ಸಿ.ಪಾಟೀಲ, ಗೀರೀಶ, ಮುಂತಾದವರು ಇದ್ದರು. 


ಸುದ್ದಿ ಓದಿ