ಇಂಡಿ

ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಇಂಡಿ: ಕನಸು ಕಾಣಬೇಕು. ಆ ಕನಸುಗಳು ದೊಡ್ಡ ಉದ್ದೇಶ ಹೊಂದಿರಬೇಕು. ಯಾವುದೇ ಸಾಧನೆ ಮಾಡಲು ಗುರು, ತಂದೆ-ತಾಯಿ, ಗೆಳೆಯರ ಆಶಿರ್ವಾದ ಮುಖ್ಯ ಈ ದಿಶೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತ ಲಲಿತಾಬಾಯಿ ದಶವಂತ ಹೇಳಿದರು. 

ಶುಕ್ರವಾರ ಪಟ್ಟಣದ ಶಾಂತೇಶ್ವರ ಮಾದ್ಯಮಿಕ ಶಾಲೆಯಲ್ಲಿ 1989-90 ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕಲಿತ ಗೆಳೆಯರ ಬಳಗದ ವತಿಯಿಂದ ನಡೆದ ಸಾಧಕರಿಗೆ ಸನ್ಮಾನ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಚಿಕ್ಕವಳಿದ್ದಾಗ ಬಡತನ ಕಾಡುತ್ತಿತ್ತು. ಆದರೂ ಛಲ ಬಿಡದೇ ನಾಟಕಗಳಲ್ಲಿ ಪಾತ್ರಮಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದೇನೆ ಎಂದ ಅವರು, ಇದಕ್ಕೆ ಸತತ ಪ್ರಯತ್ನ ಮತ್ತು ದೊಡ್ಡ ಕನಸು ಕಾರಣ ಎಂದರು. 

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಬಿ.ಎಸ್‌.ಪಾಟೀಲ, ಭಿ.ಎಲ್‌.ಓ ಪ್ರಶಸ್ತಿ ವಿಜೇತ ಶಿವಾನಂದ ಚಿಕ್ಕಬೇವನೂರ, 45 ಕೆ.ಜಿ.ಕುಸ್ತಿ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜಟ್ಟಿಂಗರಾಯ ಮಹಾದೇವ ನಿಂಗಾರಿ ಇವರನ್ನು ಸನ್ಮಾನಿಸಲಾಯಿತು. 

ಉಪ ಪ್ರಾಚಾರ್ಯ ಎ.ಪಿ.ಬಿರಡ, ದಶರಥ ಕೋರಿ ಗುರುಗಳು, ಶ್ರೀಮಂತ ಬಾರಿಕಾಯಿ, ಸನ್ಮಾನಿತ ಬಿ.ಎಸ್‌.ಪಾಟೀಲ ಮಾತನಾಡಿದರು. 

ವೇದಿಕೆಯ ಮೇಲೆ ನ್ಯಾಯವಾದಿ ರಮೇಶ ಕುಲಕರ್ಣಿ, ಶಾಂತು ಧನಶೆಟ್ಟಿ, ಸುರೇಶ ಅವರಾದಿ, ಬಸವರಾಜ ದೇವರ, ಕೆ.ಆರ್‌. ಆದ್ಯ, ಹುಸೇನಿ ಮಕಾನದಾರ, ಮಹಾದೇವಿ ನಿಂಗಾರಿ, ಸಿದರಾಯ ಆಳೂರ  ಮತ್ತಿತರಿದ್ದರು. 

 

ಸುದ್ದಿ ಓದಿ