ಗೋಕಾಕ್

ಬಸವರಾಜ ಕಲ್ಯಾಣಶೆಟ್ಟಿಗೆ ಸನ್ಮಾನ

ಬಸವರಾಜ ಕಲ್ಯಾಣಶೆಟ್ಟಿಗೆ ಸನ್ಮಾನ

ಗೋಕಾಕ 21: ನಗರದ ಗೋಕಾಕ ಅರ್ಬನ್ ಕೋ.ಆಪ್ ಕ್ರೆಡಿಟ್ ಬ್ಯಾಂಕ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ ಅವರು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕಗಳ ಮಹಾಮಂಡಳಕ್ಕೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಕ್ಕೆ ಹಾಗೂ ಬ್ಯಾಂಕಿನ ನಿರ್ದೇಶಕರುಗಳಾದ ಸಿ.ಬಿ.ತಾರಳೆ ಮತ್ತು ಎಂ.ಡಿ.ಚುನಮರಿ ಅವರು ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಗೆ ನಿರ್ದೇಶಕರುಗಳಾಗಿ ಚುನಾಯಿತರಾಗಿದ್ದ ಹಿನ್ನಲೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಬುಧವಾರದಂದು ಬ್ಯಾಂಕಿನ ಸಭಾ ಭವನದಲ್ಲಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಸಿ.ಬಿದರಿ, ನಿರ್ದೇಶಕರುಗಳಾದ ಎಸ್.ಬಿ.ಮಗದುಮ್, ಎಸ್.ವಿ.ಘೋಡಗೇರಿ, ಎ.ಕೆ.ಹೆಗ್ಗಣ್ಣವರ, ಸಿ.ಎಂ.ಕುರಬೇಟ, ಎಸ್.ಬಿ.ಅಂಕಲಿ, ಪಿ.ಎಂ.ಮಡ್ಡೆಪ್ಪಗೋಳ ಹಾಗೂ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ಸುದ್ದಿ ಓದಿ