ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ
ಇಂಡಿ: ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾಗಿ ಬದುಕಲು ಹೇಳಿಕೊಟ್ಟು ನಿವೃತ್ತಿ ಹೊಂದಿದ ಪಟ್ಟಣ್ ಗುರುಗಳು ತಮ್ಮ ಸೇವಾವಧಿಯಲ್ಲಿ ಒಂದು ಕಪ್ಪು ಚುಕಕೆಯೂ ಇಟ್ಟುಕೊಳ್ಳದಂತೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದು ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಅಧಿಕಾರಿ, ಎಲ್. ಬಿ. ಪಾಟೀಲ ಹೇಳಿದರು.
ಅವರು ವಿಜಯಪುರದ ಜಗಜ್ಯೋತಿ ಬಸವೇಸ್ವರ ವಿದ್ಯಾವರ್ದಕ ಸಂಘದಲ್ಲಿ ಹಮ್ಮಿಕೊಂಡ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಇಂಡಿ ತಾಲೂಕಿನ ಗೊರನಾಳ ಗ್ರಾಮದ ವಿಠ್ಠಲ್ ಆರ್. ಪಟ್ಟಣ್ ಅವರು ವಿಜಯಪುರದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದು, ಅವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಎಸ್.ಎನ್. ಮಂಗಳೂರ, ಎಸ್.ಎನ್. ನಾರ್ಪಸ್ವಾಮಿ, ಹೆಚ್. ಪಿ. ಬಗಲಿ, ಶ್ರೀಮತಿ ಬಗಲಿ ಗುರುಮಾತೆಯರಿಗೂ ಸತ್ಕರಿಸಿ ಗೌರವಿಸಲಾಯಿತು.
ಬಸವೇಶ್ವರ ವಿದ್ಯಾವರ್ದಕ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.