ವಿದ್ಯಾರ್ಥಿಗಳಿಗೆ ದೂರ ದೃಷ್ಟಿ ಅಗತ್ಯ : ಪಾಟೀಲ
ಗುಳೇದಗುಡ್ಡ,ಸೆ.18: ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ವಿದ್ಯಾವಂತರಾಗಿ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ದೂರ ದೃಷ್ಟಿಕೋನ ಅಗತ್ಯತೆ ಇದೆ. ಬಡ ವಿದ್ಯಾರ್ಥಿಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಬಿ.ವಿ.ಪಾಟೀಲ ಹೇಳಿದರು.
ಅವರು ಇಲ್ಲಿಗೆ ಸಮೀಪದ ಕೆಲವಡಿಯ ಲಕ್ಷ್ಮಿರಂಗನಾಥ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ಶಾಲೆಗೆ ದೇಣಿಗೆ ನೀಡಿದವರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಡತನದಿಂದ ಬಂದ ಮಕ್ಕಳು ಹೆಚ್ಚಾಗಿರುತ್ತಾ. ಅವರ ಶೈಕ್ಷಣಿಕ ಪ್ರೋತ್ಸಾಹಕ್ಕೆ ಕೆಲವು ಸೌಲಭ್ಯ ನೀಡುವ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಶಾಲೆಗೆ ಎರಡು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ ಶ್ರೀಮತಿ ಅನ್ನಪೂರ್ಣಮ್ಮ ಪಾಟೀಲ ಅವರನ್ನು ಸನ್ಮಾನಿಸಿ ಅವರು ನೀಡಿದ ಹಣವನ್ನು ಬ್ಯಾಂಕಿನಲ್ಲಿಟ್ಟು ಅದರ ಬಡ್ಡಿ ಹಣದಲ್ಲಿ ಪ್ರತಿವರ್ಷ ನಗದು ಪುರಸ್ಕಾರ ನೀಡಲು ಸಾಧ್ಯವಾಗುತ್ತದೆ ಎಂದರು.
ಶಾಲೆಗೆ ಸುಣ್ಣ, ಬಣ್ಣ ಹಚ್ಚಲು ಹಾಗೂ ಉಪಯುಕ್ತ ಸಾಮಾಗ್ರಿ ದಾನ ಮಾಡಿದ ಬಸನಗೌಡ ಪಾಟೀಲ, ರಮೇಶ ಗೌಡರ, ಕನಕಪ್ಪ ಪೂಜಾರಿ, ರಂಗಪ್ಪ ಕಾರಬಾನ, ಹೊನ್ನನಗೌಡ ಗೌಡರ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು..
ಗ್ರಾಮ ಪಂಚಾಯತ್ ಸದಸ್ಯ ಅಡಿವೆಪ್ಪ ಹಡಗಲಿ, ಶಾಲಾ ಗುರುಮಾತೆ ಎಸ್.ಎನ್.ಕಮ್ಮಾರ, ದೈಹಿಕ ಶಿಕ್ಷಕ ಎಸ್.ಬಿ.ಮಾಚಾ, ಆಯ್.ಬಿ.ಕೋತಿನ, ಎಸ್.ಎಚ್.ಬದಾಮಿ, ಟಿ. ಎಮ್.ಮೂಲಿಮನಿ, ಎ.ವಿ.ದಡ್ಡಿ, ಎಸ್.ಎಸ್.ಕಡಿ ಉಪಸ್ಥಿತರಿದ್ದರು.