ಗೋಕಾಕ್

ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಘಟಪ್ರಭಾ16: ಕೊರೋನಾ ಹೆಮ್ಮಾರಿಯನ್ನು ವೇಗವಾಗಿ ಮೆಟ್ಟಿನಿಂತ ಮೊದಲು ರಾಷ್ಟ್ರ ಭಾರತ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಹೇಳಿದರು.

ಶನಿವಾರ ಇಲ್ಲಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಹಾಗೂ ಮೂಡಲಗಿ ವಲಯದ ಶಿಕ್ಷಕರ ಸಂಘದ ಪದಾಧಿಕಾರಿ ಮತ್ತು ಪದನ್ನೋತಿ ಹೊಂದಿದ ಗುರುಗಳಿಗೆ ಸನ್ಮಾನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಸರಿಯಿಲ್ಲ. ಶಿಕ್ಷಕರು ಸಂಘಗಳಲ್ಲಿ ಅಧಿಕಾರ ವಹಿಸಿಕೊಂಡರೆ ಮಕ್ಕಳಿಗೆ ಯಾವುದೆ ಪ್ರಯೋಜನವಿಲ್ಲ. ಶಿಕ್ಷಕರಿಗೆ ಮಕ್ಕಳ ವಿದ್ಯಾಬ್ಯಾಸ ಮಹತ್ವದ್ದಾಗಬೇಕು. ಆ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಕಾರ್ಯ ಪ್ರವರ್ತರಾಗಬೇಕೆಂದು ಕಿವಿ ಮಾತು ಹೇಳಿದರು. 

ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿ ಶಾಲೆಯಲ್ಲಿ ಗ್ರಂಥಾಲಯದ ಅವಶ್ಯಕತೆಯಿದೆ. ಶಿಕ್ಷಕರು ಮಕ್ಕಳಿಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಿಸಬೇಕು. ಈ ಶಾಲೆ ಮಕ್ಕಳಿಗೆ ಪ್ರತ್ಯೇಕ ಸುಸಜ್ಜಿತ ಗ್ರಂಥಾಲಯವನ್ನು ಸ್ಥಾಪಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.  

ಶಾಲೆಯಲ್ಲಿ ನಿರ್ಮಿಸಲಾದ ನೂತನ ಡಿಜಿಟಲ್ ಮುಖ್ಯೋಪಾದ್ಯಾಯರ ಕೊಠಡಿ ಹಾಗೂ ಗ್ರಂಥಾಲಯವನ್ನು ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ ಉದ್ಘಾಟಿಸಿದರು. 

ಕ.ರಾ.ಪ್ರಾ ಶಾಲಾ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಹಾಗೂ ಮೂಡಲಗಿ ವಲಯದ ಶಿಕ್ಷಕರ ಸಂಘದ ಪದಾಧಿಕಾರಿ ಮತ್ತು ಪದನ್ನೋತಿ ಹೊಂದಿದ ಉರ್ದು ಶಾಲೆಯ ಗುರುಗಳಿಗೆ ಈ ಸಂದರ್ಭದಲ್ಲಿ ಗಣ್ಯರಿಂದ ಸನ್ಮಾಸಲಾಯಿತು. 

ಹಿರಿಯರಾದ ಡಿ.ಎಂ.ದಳವಾಯಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ, ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಎಸ್.ಎಂ.ಲೋಕನ್ನವರ, ಇಸಿಓ ಎ.ಕೆ.ಸಯ್ಯದ, ಶಿಕ್ಷಕರ ಸಂಘದ ಮೂಡಲಗಿ ತಾಲೂಕಾಧ್ಯಕ್ಷ ಎಲ್.ಎಂ.ಬಡಕಲ, ಉಪಾಧ್ಯಕ್ಷ ಡಿ.ಎ.ಡಾಂಗೆ, ಕಾರ್ಯದರ್ಶಿ ಬುದ್ಧಗೋಳ, ಹಿರೇಮಠ ಸರ್, ಆರ್.ಎಂ.ಮಹಾಲಿಂಗಪೂರ, ಡಿ.ಜೆ.ಕಲಾರಕೊಪ್ಪ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸುರೇಶ ಪೂಜಾರಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ ಸೇರಿದಂತೆ ಎಸ್.ಡಿ.ಎಂ.ಸಿ ಎಲ್ಲ ಸದಸ್ಯರು ಹಾಗೂ ನೂರಾರು ಶಿಕ್ಷಕರು ಉಪಸ್ಥಿತಿರಿದ್ದರು.

ಶಿಕ್ಷಕ ಶಾನವಾಜ ದಬಾಡಿ ಸ್ವಾಗಿತಿಸಿದರು. ಶಿಕ್ಷಕಿ ಎಸ್.ಎಂ.ಸಿದ್ದಿಕ್ಕಿ ನಿರೂಪಿಸಿದರು. ಶಿಕ್ಷಕ ಶಫಿ ಬಾಗಸಿರಾಜ ವಂದಿಸಿದರು. 

ಸುದ್ದಿ ಓದಿ