ಪ್ರತಿಭಾ ವಿದ್ಯಾರ್ಥಿಗಳಿಗೆ ಸತ್ಕಾರ
ಶೇಡಬಾಳ 25: 2020-21 ನೇ ಸಾಲಿನಲ್ಲಿ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದ ಕಾಗವಾಡದ ಆಚಾರ್ಯ ವಿದ್ಯಾಸಾಗರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಬ್ರಹ್ಮನಾಥ ಕೋ-ಆಫ್ ಕ್ರೆಡಿಟ್ ಸೊಸಾಯಟಿ ವತಿಯಿಂದ ಬಹುಮಾನ ನೀಡಿ ಸತ್ಕರಿಸಲಾಯಿತು.
ವಿದ್ಯಾರ್ಥಿನಿಯರಾದ ರುಚಾ ಶಾಂತಿನಾಥ ಕರವ ಶೇ. 98.4, ಸೃಷ್ಟಿ ಸಂಜಯ ಕದ್ದು ಶೇ. 95.68, ಸ್ವಪ್ನಾ ಶಾಂತಿನಾಥ ಕಿನಂಗೆ ಶೇ. 95.68, ವಿಜಯ ಬಾಹುಬಲಿ ಕಿನಂಗೆ ಶೇ. 93.92, ಅನುಷ್ಕಾ ಕಾಕಾಸಾಬ ಚೌಗಲೆ ಶೇ. 91.04, ಗೀತಾ ಮಹೇಶ ಮಂಗಾವತಿ ಶೇ. 90.24 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
ಬುಧವಾರ ದಿ. 25 ರಂದು ಕಾಗವಾಡ ಬ್ರಹ್ಮನಾಥ ಕೋ-ಆಫ್ ಕ್ರೆಡಿಟ್ ಸೊಸಾಯಟಿಯ ಸಭಾಂಗಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸಂಘದ ಅಧ್ಯಕ್ಷ ವಿಜಯ ಕರೋಲೆಯವರು ಸತ್ಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳಗಲಿ ಎಂಬ ಉದ್ದೇಶದಿಂದ ಸಂಘವು ಪ್ರತಿವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಸತ್ಕರಿಸುವ ಪರಿಪಾಠವನ್ನು ಹೊಂದಿದ್ದೇವೆ. ಮುಂದಿನ ವರ್ಷವು ಕೂಡ ಇದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಈ ಸಮಯದಲ್ಲಿ ಬ್ರಹ್ಮನಾಥ ಕ್ರೆಡಿಟ್ ಸೊಸಾಯಟಿಯ ಅಧ್ಯಕ್ಷ ವಿಜಯ ಕರೋಲೆ, ಉಪಾಧ್ಯಕ್ಷ ರಾಜು ಅಡೂಲಕರ, ವಿಜಯ ಖೋತ, ಭಾರತಿ ಕಿನಂಗೆ, ಅಣ್ಣಾಸಾಬ ಭೋಸಗೆ, ಜೀತೇಂದ್ರ ಕರವ, ಅರುಣ ಕಿನಂಗೆ, ಸುನೀಲ ಮಾಲಗಾಂವೆ, ಪ್ರಕಾಶ ಮಾಲಗತ್ತೆ, ರಾವಸಾಬ ಕೋಳೆಕರ, ಆರತಿ ಚೌಗಲೆ, ಶಂಕರ ಗಸ್ತೆ, ಬಾಳಕೃಷ್ಣ ಭಜಂತ್ರಿ ಸೇರಿದಂತೆ ಬ್ಯಾಂಕಿನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ಸದಸ್ಯರು ಇದ್ದರು.