ಸಾಧಕ ಸತ್ತಾರ ಬಾಗವಾನರವರಿಗೆ ಸನ್ಮಾನ
ಇಂಡಿ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಶೈಕ್ಷಣಿಕ, ಸಹಕಾರಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸತ್ತಾರ ಬಾಗವಾನ ಇವರನ್ನು ಸನ್ಮಾನಿಸಲಾಯಿತು.
ಸತ್ತಾರ ಬಾಗವಾನರವರು ಇಂಡಿಯಲ್ಲಿ ಬಾಗವಾನ ಅಲ್ಪ ಸಂಖ್ಯಾತರ ಬ್ಯಾಂಕು, ಎಸ್.ಜಿ.ಬಾಗವಾನ ಇಂಗ್ಲಿಷ ಮತ್ತು ಉರ್ದು ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬಾಗವಾನ ಸಮಾಜದ ಅಧ್ಯಕ್ಷರಾಗಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾಗಿ ಬಡವರ, ದುರ್ಬಲರ ಸಹಾಯ ಮಾಡಿದ ನಿಮಿತ್ಯ ದೇವಸ್ಥಾನ ಸಮಿತಿಯವರು ಸನ್ಮಾನಿಸಿದರು.
ದೇವಸ್ಥಾನದಲ್ಲಿ ಬೆಳಗ್ಗೆ ಆರತಿ ಸಮಾರಂಭ ಮುಗಿದ ನಂತರ ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ ಕೋಳೆಕರ, ಉಪಾಧ್ಯಕ್ಷ ನಾಗನಾಥ ಹಂಚಾಟೆ ಸನ್ಮಾನಿಸಿದರು.
ಬಾಳು ಕಠಾರೆ, ಸುಭಾಸ ಬಳಮಕರ, ಸುನೀಲ ಸುಲಾಖೆ, ಅರ್ಚಕ ಶಿವಾನಂದ ಪೂಜಾರಿ, ಕಿರಣ ಬಳಮಕರ, ಶಿವಾನಂದ ಕೊಪ್ಪದ, ಕಿರಣ ಕೋಳೆಕರ, ಈಶ ಕೋಳೆಕರ, ಮಯೂರ ಪತಂಗೆ ಮತ್ತಿತರಿದ್ದರು.