ಪಾರ್ಥನಹಳ್ಳಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ
ಕಾಗವಾಡ 22: ತಾಲೂಕಿನ ನೂತನವಾಗಿ ಚುನಾಯಿತಗೊಂಡ ಎಲ್ಲ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಗ್ರಾಮದ ಅಭಿವೃದ್ಧಿ ಒಂದೇ ಗುರಿ ಇಟ್ಟುಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಿರಿ ಎಂದು ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ಸದ್ಯಸರಿಗೆ ಕಿವಿಮಾತು ಹೇಳಿದರು.
ಕಾಗವಾಡ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಪಂಚಾಯಿತಿಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶಾಸಕ ಶ್ರೀಮಂತ ಪಾಟೀಲರು ಸನ್ಮಾನಿಸಿ ಸದಸ್ಯರಿಗೆ ಕಿವಿಮಾತು ಹೇಳಿದರು.
ಪಾರ್ಥನಹಳ್ಳಿ ಗ್ರಾಮಪಂಚಾಯಿತಿಯಲ್ಲಿ 19 ಸದಸ್ಯರನ್ನು ಹೊಂದಿದ್ದು ಅದರಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕ್ಷತ್ರಿಯ ಮರಾಠ ಸಮಾಜದ ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಭಾಹುಸಾಹೇಬ ಜಾದವ ಇವರ ನೇತೃತ್ವದಲ್ಲಿ 10 ಸದಸ್ಯರು ಆಯ್ಕೆಗೊಂಡು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.
ನೂತನ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸೋನಾಬಾಯಿ ಚವ್ಹಾಣ, ಉಪಾಧ್ಯಕ್ಷ ಬೀರಬಲ್ ಬಿರಾದಾರ್ ಇವರನ್ನು ಶಾಸಕ ಶ್ರೀಮಂತ ಪಾಟೀಲರು ಸನ್ಮಾನಿಸಿದರು.
ಸನ್ಮಾನ ಸಮಾರಂಭದಲ್ಲಿ ಭಾಹುಸಾಹೇಬ ಜಾದವ, ಗ್ರಾಮಪಂಚಾಯತಿ ಸದಸ್ಯರಾದ ಶಿವರಾಯ ತೇಲಿ, ಅಪ್ಪಾಸಾಹೇಬ ನಿಜಗುಣವರ, ಪರಗೌಡ ಮಗದುಮ್, ಶಿವಾನಂದ ನಿಜಗುಣವರ, ರಮೇಶ್ ಬಡಿಗೇರ್ ಸಹ ಅನೇಕರು ಉಪಸ್ಥಿತರಿದ್ದರು.