ಯೋಧ ನಾಗೇಂದ್ರ ಉದ್ಯಾಗೋಳಗೆ ಸನ್ಮಾನ
ಗೋಕಾಕ 01: ಕಾಶ್ಮೀರ ಗಡಿಯಲ್ಲಿ ನುಸುಳಿಕೊಂಡಿದ್ದ ಭಯೋತ್ಪಾದಕರನ್ನು ಪ್ರಾಣದ ಹಂಗು ತೊರೆದು ಗುಂಡಿಕ್ಕಿಕೊಂದು ದೇಶಪ್ರೇಮ ಮೆರೆದಿದ್ದ ವಡೇರಹಟ್ಟಿ ಗ್ರಾಮದ ಯೋಧ ನಾಗೇಂದ್ರ ಉದ್ಯಾಗೋಳನಿಗೆ ಭೂಸೇನೆಯ ಲೆಪ್ಟಿನಂಟ ಜನರಲ್ ಆಲುಖ್ಯ ಅವರು ನವದೆಹಲಿಯ ಸೇನಾಭವನದಲ್ಲಿ ನಡೆದ ಸಮಾರಂಭದಲ್ಲಿ ಸೇನಾಪದಕ ನೀಡಿ (ಮೆಡಲ್) ನೀಡಿ ಗೌರವಿಸಿದ್ದರು.
ದೇಶಕ್ಕೆ ಹೆಮ್ಮೆ ತಂದ ಈ ಯೋಧನನ್ನು ವಡೇರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೋಕಾಕ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ವಡೆಯರ ಮತ್ತು ಹಿರಿಯ ಕಾರ್ಯಕರ್ತೆ ಶ್ರೀದೇವಿ ತಡಕೋಡ ಮತ್ತು ಖ್ಯಾತ ಸಾಹಿತಿ ಮಹಾಲಿಂಗ ಮಂಗಿ ಅವರು ಸೇರಿಕೊಂಡು ಅಭಿನಂದಿಸಿ ಸನ್ಮಾನಿಸಿದರು.
ಯೋಧನ ಕುರಿತು ಸಾಹಿತಿ ಮಹಾಲಿಂಗ ಮಂಗಿ, ರಾಜೇಶ್ವರಿ ವಡೆಯರ, ಶ್ರೀದೇವಿ ತಡಕೋಡ ಮಾತನಾಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಅಡಿವೆಪ್ಪ ಹಾದಿಮನಿ, ಹಿರಿಯರಾದ ಮಾರುತಿ ಸೊಡ್ರುಗೋಳ, ಬನಪ್ಪ ವಡೆಯರ, ಮಾರುತಿ ಪೂಜೇರಿ, ಯಲ್ಲಪ್ಪ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಾನಿಧ್ಯವನ್ನು ಮಲ್ಲಿಕಾರ್ಜುನ ಮಠದ ಗುರುಪ್ರಸಾದ ಶ್ರೀಗಳು ವಹಿಸಿದ್ದರು. ಶಿಕ್ಷಕಿ ಇಂದ್ರವ್ವ ಆಸುಂದಿ ಪ್ರಾರ್ಥಿಸಿದರು. ಪತ್ರಕರ್ತ ಬಸವರಾಜ ಕುರೇರ ಸ್ವಾಗತಿಸಿ, ವಂದಿಸಿದರು.