ಮುದೇನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬುರುಡಿಕಟ್ಟಿ ಸನ್ಮಾನ
ರಾಣೇಬೆನ್ನೂರು:ಸೆ 3 ತಾಲೂಕಿನ ಮುದೇನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕ್ರ್ಪ ಚೆನ್ನಪ್ಪ ಬುರುಡಿಕಟ್ಟಿ ಅವರನ್ನು ನಗರದ ಹಲಗೇರಿ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮಂಜುನಾಥ್ ಗೌಡಶಿವಣ್ಣನವರ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಉಜ್ಜಪ್ಪ ಹಲಗೇರಿ, ಹನುಮಂತಪ್ಪ ಹುಗ್ಗಿ ,ನಾಗರಾಜ್ ಪಾಟೀಲ್, ಜೈರಾಮ್ ಅಗಡಿ, ಮೌನೇಶ್ಕಮ್ಮಾರ್, ಜಟ್ಟಪ್ಪ ಗಡ್ಡದಗೂಳಿ, ರಾಜಪ್ಪ ಗಡ್ಡದಗೂಳಿ, ರುದ್ರಗೌಡ ಪಾಟೀಲ್, ನೀಟಪಳ್ಳಿ ಕುಮಾರಸ್ವಾಮಿ ಪಾಟೀಲ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.